ಲಂಡನ್:ಯುಕೆ ರಾಣಿ ಎಲಿಜಬೆತ್ II ಅವರು ಮರಳಿ ಬಕಿಂಗ್ಹ್ಯಾಮ್ ಅರಮನೆಗೆ ಬಂದಿದ್ದಾರೆ. ಕೊರೊನಾ ವೈರಸ್ ತಗಲದಂತೆ ಕಾಪಾಡಲು ರಾಜನನ್ನು ವಿಂಡ್ಸರ್ ಕ್ಯಾಸ್ಟಲ್ಗೆ ಕರೆದೊಯ್ಯಲಾಗಿತ್ತು.
ರಾಣಿ ಅರಮನೆಯಲ್ಲಿ ಇಲ್ಲದಿರುವುದಕ್ಕೆ ಹಲವಾರು ವದಂತಿಗಳು ಹಬ್ಬಿದ್ದವು. ಕೊರೊನಾ ವೈರಸ್ ಭಯದಿಂದ ರಾಣಿ ಬಕಿಂಗ್ಹ್ಯಾಮ್ ಅರಮನೆಯನ್ನು ತೊರೆದಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು. ಆದ್ರೆ ಇದನ್ನು ಹಿರಿಯ ಸಹಾಯಕರೊಬ್ಬರು ನಿರಾಕರಿಸಿದ್ದಾರೆ.
ರಾಣಿ ತನ್ನ ಅಧಿಕೃತ ರಾಜಮನೆತನವನ್ನು ತೊರೆದು, ವಿಂಡ್ಸರ್ ಕ್ಯಾಸಲ್‌ಗೆ ತೆರಳಿದ್ದಾರೆ ಎಂದು ಶನಿವಾರ ಪತ್ರಿಕೆಯೊಂದು ವರದಿ ಮಾಡಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ.
ಎರಡು ವಾರಗಳಿಂದ ಅರಮನೆಗೆ ಯಾವುದೇ ಅಧಿಕಾರಿಗಳು ಬಂದಾಗ ರಾಣಿ ಗ್ಲೋವ್ಸ್ ಧರಿಸುತ್ತಾರೆ. ಮತ್ತು ಶೇಕ್ ಹ್ಯಾಂಡ್ ಕೊಡುವುದನ್ನು ಕಡಿಮೆ ಮಾಡಿರುವುದು ಕಂಡುಬಂದಿದೆ. ಅಲ್ಲದೇ ಕೊರೊನಾ ವೈರಸ್ ಅರಮನೆ ಸುತ್ತಾಮುತ್ತಾ ಹರಡದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಸಲಹೆಯ ಮೇರೆಗೆ ವೇಲ್ಸ್ ರಾಜಕುಮಾರ ಮತ್ತು ಡಚ್ಚಸ್ ಆಫ್ ಕಾರ್ನ್‌ವಾಲ್ ಈ ವಾರದ ಬೋಸ್ನಿಯಾ, ಸೈಪ್ರಸ್ ಮತ್ತು ಜೋರ್ಡಾನ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಯುಕೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಒಂದು ದಿನದಲ್ಲಿ 232 ರಷ್ಟು ಏರಿಕೆಯಾಗಿದೆ.