ಲಂಡನ್:ಯುನೈಟೆಡ್ ಕಿಂಗಂಡಮ್ನ ಪ್ರಧಾನಿ ಬೋರಿಸ್ ಜಾನ್ಸನ್ ಏಪ್ರಿಲ್ ಅಂತ್ಯದ ವೇಳೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಯುರೋಪಿಯನ್ ಯೂನಿಯನ್ನಿಂದ ಇಂಗ್ಲೆಂಡ್ ಹೊರ ಬಿದ್ದಾಗಿನ ಬಳಿಕ ಬೋರಿಸ್ ಜಾನ್ಸನ್ ಇದೇ ಮೊದಲ ಬಾರಿಗೆ ಪ್ರಮುಖ ರಾಷ್ಟ್ರವೊಂದಕ್ಕೆ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ:ಲಸಿಕೆ ಕುರಿತ ವದಂತಿ ಹರಡಲು ಸೋಷಿಯಲ್ ಮೀಡಿಯಾ ಬಳಕೆದಾರರೇ ಕಾರಣ: ಫೇಸ್‌ಬುಕ್
ಈ ಬಗ್ಗೆ ಇಂಗ್ಲೆಂಡ್ ಪ್ರಧಾನಿ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ. ಈ ಮೊದಲು ಯುರೋಪಿಯನ್ ಯೂನಿಯನ್ ನಿಯಮಗಳಿಗೆ ಒಳಪಟ್ಟಿದ್ದ ವ್ಯಾಪಾರ ಒಪ್ಪಂದಗಳು ಇಂಗ್ಲೆಂಡ್ಗೆ ಇನ್ಮುಂದೆ ಅನ್ವಯವಾಗುವುದಿಲ್ಲ. ಹೀಗಾಗಿ ಇಂಗ್ಲೆಂಡ್ ಈಗ ಏಕಾಂಗಿಯಾಗಿ ತನ್ನ ಮೂಲ ವ್ಯಾಪಾರ ವಹಿವಾಟುಗಳಿಗೆ ಯೂನಿಯನ್ ಸೇರಿದಂತೆ ಇತರ ರಾಷ್ಟ್ರಗಳೊಂದಿಗೆ ಹೊಸ ಒಪ್ಪಂದಗಳನ್ನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ.
ಇನ್ನು ಭಾರತದ ಈ ಭೇಟಿ ಭಾರಿ ಮಹತ್ವವನ್ನೂ ಪಡೆದುಕೊಂಡಿದೆ.