ಲಂಡನ್:ಸಂಕಷ್ಟದಲ್ಲಿರುವ ಅಫ್ಘನ್ ಜನರಿಗೆ ಬೆಂಬಲ ನೀಡಬೇಕೆಂದು ಜಿ7 ನಾಯಕರಿಗೆ ಕರೆ ನೀಡುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಿಳಿಸಿದ್ದಾರೆ. ಅಫ್ಘನ್ ಕುರಿತ ಚರ್ಚು ಸಭೆಯಲ್ಲಿ ಪ್ರಧಾನಿ ಹೇಳಿದ್ದಾರೆ.
ಬ್ರಿಟನ್ ಪ್ರಧಾನಿ ಜಾನ್ಸನ್ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿ7 ರಾಷ್ಟ್ರಗಳ ನಾಯಕರು ವಿಡಿಯೋ ಕಾನ್ಫರನ್ಸ್ನಲ್ಲಿ ಅಫ್ಘನ್ ಸ್ಥಿತಿಗತಿ ಕುರಿತು ಚರ್ಚಿಸಲಿದ್ದಾರೆ. ಈ ವೇಳೆ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಹಾಗೂ ಯುಎಸ್ ನಾಯಕರಿಗೆ ಅಫ್ಘನ್ ಜನರ ಸ್ಥಳಾಂತರ ಹಾಗೂ ಆರ್ಥಿಕ ಸಹಾಯಕ್ಕೆ ಬೆಂಬಲ ನೀಡುವಂತೆ ಬ್ರಿಟನ್ ಪಿಎಂ ಮನವಿ ಮಾಡಲಿದ್ದಾರೆ.