ಲಂಡನ್ :ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಚಾನ್ಸಲರ್ ರಿಷಿ ಸುನಕ್ ಕೋವಿಡ್ ಸೋಂಕಿತನ ಸಂಪರ್ಕಕ್ಕೆ ಬಂದ ಹಿನ್ನೆಲೆ ಐಸೋಲೇಷನ್ಗೆ ಒಳಗಾಗಿದ್ದಾರೆ. ಅಲ್ಲದೆ ಟೆಸ್ಟಿಂಗ್ ಬಳಿಕ ಪ್ರಧಾನಿ ಜಾನ್ಸನ್ ಹಾಗೂ ಸುನಕ್ ಇಬ್ಬರೂ ದೈನಂದಿನ ಕಚೇರಿ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್ ಹೌಸ್ ತಿಳಿಸಿತ್ತು. ಆದರೆ, ಬಳಿಕ ಅವರಿಬ್ಬರು ಯಾವುದೇ ಕಚೇರಿ ಕಾರ್ಯಗಳಲ್ಲೂ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಅಲ್ಲದೆ ಪ್ರಧಾನಿಯು ರಾಷ್ಟ್ರೀಯ ಆರೋಗ್ಯ ಸೇವೆ (NHS) ಪರೀಕ್ಷೆ ಮತ್ತು ಟ್ರೇಸಿಂಗ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಮೂಲಕ ಅವರಿಗೆ ಯಾರಿಂದ ಸೋಂಕು ಹರಡಿದೆ ಎಂಬ ಪತ್ತೆಗೆ ಮುಂದಾಗಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಜೊತೆಗೆ ಅವರ ನಿವಾಸ ಚೆಕ್ಕರ್ಸ್ನಲ್ಲಿ ಟೆಸ್ಟ್ ಆ್ಯಂಡ್ ಟ್ರೇಸಿಂಗ್ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲಿಯೇ ಅವರು ಐಸೋಲೇಷನ್ಗೆ ಒಳಗಾಗಲಿದ್ದಾರೆ. ದೂರದಿಂದಲೇ ಸಚಿವರೊಂದೊಗೆ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಅಂತಲೂ ಮಾಹಿತಿ ನೀಡಿದೆ.