ಬ್ರಿಟನ್: ಕಡ್ಡಾಯ ಮಾಸ್ಕ್ ಧರಿಸುವುದು ಸೇರಿದಂತೆ ಬ್ರಿಟನ್‌ನಲ್ಲಿ ಎಲ್ಲಾ ರೀತಿಯ ಕೋವಿಡ್ ನಿರ್ಬಂಧಗಳನ್ನು ವಾಪಸ್ ಪಡೆದಿರುವುದಾಗಿ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಣೆ ಮಾಡಿದ್ದಾರೆ.
ನಮ್ಮ ವಿಜ್ಞಾನಿಗಳು ದೇಶದಲ್ಲಿ ಒಮಿಕ್ರಾನ್ ಉತ್ತುಂಗಕ್ಕೇರಿದೆ ಎಂದು ಹೇಳಿದ್ದಾರೆ. ಆದರೆ ಇನ್ಮುಂದೆ ಮುಂದೆ ವರ್ಕ್ ಫ್ರಮ್ ಹೋಮ್ ಮಾಡಲು ಜನರಿಗೆ ಸೂಚಿಸುವುದಿಲ್ಲ ಎಂದು ಹೇಳಿದ್ದಾರೆ.
ತನ್ನ ದೇಶದ ಜನರಿಗೆ ಕೋವಿಡ್ ಲಸಿಕೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಯುಕೆ, ಸೋಂಕಿನಿಂದ ಸಂಪೂರ್ಣವಾಗಿ ಯಶಸ್ಸು ಗಳಿಸಲು ಯುರೋಪ್‌ನಲ್ಲೇ ಬ್ರಿಟನ್ ಅತಿ ವೇಗವಾಗಿ ಕೆಲಸ ಮಾಡುತ್ತಿದೆ ಎಂದು ಜಾನ್ಸನ್ ತಿಳಿಸಿದ್ದಾರೆ.
ಒಮಿಕ್ರಾನ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಮನೆಯಿಂದಲೇ ಕೆಲಸ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ಪ್ರಮಾಣ ಪತ್ರ ತೋರಿಸುವುದು ಸೇರಿದಂತೆ ಹಲವು ಹೆಚ್ಚುವರಿ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಿದ್ದು, ಈ ಆದೇಶ ಗುರುವಾರದಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ನಿತ್ಯ 2 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದ ಬ್ರಿಟನ್‌ನಲ್ಲಿ ಜನವರಿ 18 ರಂದು 94,432 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 438 ಮಂದಿ ಮೃತಪಟ್ಟಿರುವ ವರದಿಯಾಗಿವೆ ಎಂದು ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಟ್ವೀಟ್ ಮಾಡಿದೆ.
ಒಟ್ಟು 52,133,611 ಜನರು ಈಗ ಲಸಿಕೆಯ ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ. ಆದರೆ 47,989,635 ಜನರು ಎರಡನೇ ಡೋಸ್ ಸ್ವೀಕರಿಸಲಿದ್ದಾರೆ. ಇದರಜೊತೆಗೆ ಈಗಾಗಲೇ 36,546,583 ಜನರು ಬೂಸ್ಟರ್ ಡೋಸ್ ಪಡೆದಿದ್ದಾರೆ ಎಂದು ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಮಾಹಿತಿ ನೀಡಿದೆ.
ಇದನ್ನೂ ಓದಿ:ಸವಾಲು ಹಾಕಿ, ಸ್ವಯಂ ಪ್ರೇರಿತವಾಗಿ ಕೋವಿಡ್ ಅಂಟಿಸಿಕೊಂಡಿದ್ದ ಗಾಯಕಿ ಹನಾ ಹೊರ್ಕಾ ನಿಧನ