ಲಂಡನ್: ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಉತ್ತರಾಧಿಕಾರಿ ಚಾರ್ಲ್ಸ್ ಅವರು ಬೆಳಕಿನ ಹಬ್ಬ ದೀಪಾವಳಿಯನ್ನು ಕೊರೊನಾ ವೈರಸ್ ಸಾಂಕ್ರಾಮಿಕ ಬಿಕ್ಕಟ್ಟನ್ನು ನಿವಾರಿಸುವುದರ ಪ್ರತೀಕವಾಗಿ ಆಚರಿಸಿದ್ದಾರೆ.
ದೀಪಾವಳಿಯೆಂಬ ಅದ್ಭುತ, ಸಂತೋಷದಾಯಕ ಹಬ್ಬವನ್ನು ಗುರುತಿಸಲು ಜಾನ್ಸನ್ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ. "ಈ ವರ್ಷದ ದೀಪಾವಳಿಯು ಬಹುಶಃ ಹಿಂದಿನ ಎಲ್ಲಾ ದೀಪಾವಳಿ ಹಬ್ಬಕ್ಕಿಂತ ಪ್ರಬಲವಾದ ಅರ್ಥವನ್ನು ಹೊಂದಿದೆ. ಏಕೆಂದರೆ ರಾಮರಾಜನು ಹೇಗೆ ರಾಕ್ಷಸ ರಾಜನನ್ನು ಸೋಲಿಸಿ ತನ್ನ ಹೆಂಡತಿ ಸೀತಾಳನ್ನು ಕರೆತಂದನೋ ಅದೇ ರಿತಿ ದೀಪಾವಳಿಯನ್ನು ಕತ್ತಲೆಯ ಮೇಲೆ ಬೆಳಕು ವಿಜಯ ಆಚರಿಸುವಂತೆಯೇ ಸಾಧಿಸುವ ಹಾಗೆಯೇ - ನನಗೆ ಕೋವಿಡ್ ಮೇಲೆ ಜಯಗಳಿಸುವೆನೆಂಬ ವಿಶ್ವಾಸವಿದೆ - "ಎಂದು ಜಾನ್ಸನ್ ಹೇಳಿದ್ದಾರೆ.
ಇದೇ ವೇಳೆ ದೀಪಾವಳಿಯಂದೂ ಕೋವಿಡ್ ಮಾರ್ಗಸೂಚಿಗಳಾದ ಮಾಸ್ಕ್ ಧರಿಸಲು ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವಂತೆ ಅವರು ಪುನರುಚ್ಚರಿಸಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಭರವಸೆಯ ದಾರಿದೀಪಗಳಾಗಿ ಪ್ರಪಂಚದಾದ್ಯಂತ ಲಕ್ಷಾಂತರ ದೀಪಾವಳಿ ದೀಪಗಳು ಬೆಳಗಲಿ ಎಂದು ಅವರು ಹೇಳಿದರು.
ಈ ವೇಳೆ ಮಾತನಾಡಿದ ಉತ್ತರಾಧಿಕಾರಿ ಚಾರ್ಲ್ಸ್ ಇದು "ದೀಪಗಳ ಹಬ್ಬ ಎಂಬುದು ತಿಳಿದಿದೆ. ಕುಟುಂಬಗಳು ಮತ್ತು ಸ್ನೇಹಿತರು ಉಡುಗೊರೆಗಳು ಮತ್ತು ಸಿಹಿತಿಂಡಿಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಭೇಟಿ ಮಾಡಿ ಆನಂದಿಸಲು ಸಿಗುವ ಒಂದು ವಿಶೇಷ ಗಳಿಗೆ. ಆದರೆ ಬಹಳ ದುಃಖಕರವೆಂದರೆ, ಈ ಬಾರಿ ಕೊರೊನಾ ಸಾಂಕ್ರಾಮಿಕ ರೋಗ ಬಿಕ್ಕಟ್ಟು ಎದುರಾಗಿರುವುದರಿಂದ ಅನೇಕರಿಗೆ ಈ ಸಂತೋಷದ ಗಳಿಗೆ ಮಿಸ್ ಆಗಿದೆ. ಇದರಿಂದ ನಿಮಗೆಲ್ಲಾ ಎಷ್ಟು ನೋವಾಗಿದೆ ಎಂಬುದು ನನಗೆ ಅರ್ಥವಾಗುತ್ತದೆ." ಎಂದು ಎಂದು ಬ್ರಿಟಿಷ್ ಸಿಂಹಾಸನದ ಮುಂದಿನ ಉತ್ತರಾಧಿಕಾರಿ ಚಾರ್ಲ್ಸ್ ಹೇಳಿದರು.
ಅಂತಿಮವಾಗಿ ಒಳ್ಳೆಯದು ಕೆಟ್ಟದ್ದರ ಮೇಲೆ ಜಯಿಸುತ್ತದೆ. ಹತಾಶೆಯ ಮೇಲೆ ಭರವಸೆಯನ್ನು ಮತ್ತು ಕತ್ತಲೆಯ ಮೇಲೆ ಬೆಳಕು ಚೆಲ್ಲುತ್ತದೆ ಎಂದೂ ಅವರು ಹೇಳಿದರು. ತನ್ನ ದಕ್ಷಿಣ ಏಷ್ಯಾದ ವಲಸೆಗಾರರ ನೇತೃತ್ವದ ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮೂಲಕ ದೀಪಾವಳಿ ಸಂದೇಶ ವಿಡಿಯೋವನ್ನು ಬಿಡುಗಡೆ ಮಾಡಿದರು. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು ಮತ್ತು ಮುಂದೆ ಸಂತೋಷದಾಯಕ, ಶಾಂತಿಯುತ ಮತ್ತು ಸಮೃದ್ಧ ವರ್ಷ ನಮ್ಮೆಲ್ಲರದಾಗಲಿ ಎಂದು ಚಾರ್ಲ್ಸ್ ಹೇಳಿದ್ರು.
ಮೇಣದ ಬತ್ತಿ ಬೆಳಗಿಸುವ ಮೂಲಕ ತಮ್ಮ ಸಂದೇಶವನ್ನು ಪ್ರಧಾನಿ ಬೋರಿಸ್ ಜಾನ್ಸನ್ ಮುಕ್ತಾಯಗೊಳಿಸಿದರು. ಎಲ್ಲರೂ ದೀಪಗಳನ್ನು ಬೆಳಗಿಸಿ ಎಲ್ಲರ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುವಾಗ, ಬೆಳಕು ಯಾವಾಗಲೂ ಹತಾಶೆಯ ಕತ್ತಲೆಯನ್ನು ಹೋಗಲಾಡಿಸುತ್ತದೆ ಎಂಬುದನ್ನು ನೆನಪಿಡಿ ಮತ್ತು ಈ ಕಷ್ಟದ ಸಮಯಗಳು ಸಹ ಸಂತೋಷದ ಸಮಯವಾಗಿ ಬದಲಾಗುತ್ತವೆ ಎಂಬುದನ್ನು ಮರೆಯಬೇಡಿ ಎಂದು ತಿಳಿಸಿದರು.