ಲಂಡನ್:ಬ್ರಿಟನ್ನಲ್ಲಿ ಜನವರಿ 26 (ಮಂಗಳವಾರ)ರವರೆಗೆ ಕೋವಿಡ್ಗೆ ಬಲಿಯಾದವರ ಸಂಖ್ಯೆ 1 ಲಕ್ಷ ದಾಟಿದ್ದು, ಪ್ರಧಾನಿ ಜಾನ್ಸನ್ ಬೋರಿಸ್ ಸಂತಾಪ ಸೂಚಿಸಿದ್ದಾರೆ. ಈ ಕಠೋರ ಅಂಕಿ-ಅಂಶಗಳಲ್ಲಿರುವ ದುಃಖವನ್ನು ಲೆಕ್ಕಾಚಾರ ಮಾಡುವುದು ಕಷ್ಟ ಎಂದಿದ್ದಾರೆ.
ಕೊರೊನಾದಿಂದಾಗಿ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ಅವರ ಕುಟುಂಬಸ್ಥರು ಭಾಗಿಯಾಗಲು ಸಾಧ್ಯವಾಗಲಿಲ್ಲ. ಅಗಲಿದ ಪ್ರತಿಯೊಂದು ಜೀವಕ್ಕೂ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಪ್ರಧಾನಮಂತ್ರಿಯಾಗಿ ಸರ್ಕಾರ ಕೈಗೊಂಡ ಎಲ್ಲಾ ನಿರ್ಧಾರಗಳ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ. ವೈರಸ್ ನಿಯಂತ್ರಣಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಅವುಗಳನ್ನು ಮುಂದುವರಿಸುತ್ತೇನೆ. ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಈ ಕೋವಿಡ್ ಅವಧಿ ಎರಡನೇ ಮಹಾಯುದ್ಧದ ನಂತರ ಸಂಭವಿಸಿದ ಅತಿ ದೊಡ್ಡ ಬಿಕ್ಕಟ್ಟು ಎಂದಿದ್ದಾರೆ.
ಡಿಸೆಂಬರ್ 8ರಿಂದ ದೇಶದಲ್ಲಿ ವ್ಯಾಕ್ಸಿನೇಷನ್ ಪ್ರಾರಂಭವಾಗಿದ್ದು, ಈವರೆಗೆ 6.5 ಮಿಲಿಯನ್ ಜನರು ಲಸಿಕೆ ಪಡೆದಿದ್ದಾರೆ. ವ್ಯಾಕ್ಸಿನೇಷನ್ಅನ್ನು ಐದು ಆದ್ಯತೆಯ ಗುಂಪುಗಳಿಗೆ ನೀಡಲಾಗಿದೆ. ಇದರಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರು, 70 ವರ್ಷಕ್ಕಿಂತ ಮೇಲ್ಪಟ್ಟವರು, ಪ್ರಾಯೋಗಿಕವಾಗಿ ದುರ್ಬಲರಾದರು, ಆರೈಕೆ ಮನೆಗಳ ಸಿಬ್ಬಂದಿ ಮತ್ತು ವೈದ್ಯಕೀಯ ಕಾರ್ಯಕರ್ತರು ಸೇರಿದ್ದಾರೆ.
ಇಂಗ್ಲೆಂಡ್ನಲ್ಲಿ ಅಧಿಕೃತವಾಗಿ ಸ್ಥಳೀಯವಾಗಿ ನಿರ್ಮಿಸಲಾದ ಅಸ್ಟ್ರಾಜೆನೆಕಾ, ಯುಎಸ್-ಜರ್ಮನ್ನ ಬಯೋಟೆಕ್ ಮತ್ತು ಯುಎಸ್ ಕಂಪನಿ ಅಭಿವೃದ್ಧಿಪಡಿಸಿದ ಮಾಡರ್ನಾ ಲಸಿಕೆಗಳಿವೆ. ಈ ಬಿಕ್ಕಟ್ಟಿನಿಂದ ನಾವು ಪಾಠ ಕಲಿಯಬೇಕಿದೆ. ಈ ಲಸಿಕೆಗಳು ಮಾತ್ರ ನಮ್ಮನ್ನು ರೋಗದಿಂದ ಮುಕ್ತಗೊಳಿಸಲು ಸಾಧ್ಯ. ಎಲ್ಲರೂ ತಪ್ಪದೇ ವ್ಯಾಕ್ಸಿನ್ ಪಡೆಯಿರಿ ಎಂದು ದೇಶವಾಸಿಗಳಿಗೆ ಮನವಿ ಮಾಡಿದರು.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ ಬ್ರಿಟನ್ನಲ್ಲಿ ಈವರೆಗೆ 37 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ದೃಢಪಟ್ಟಿದೆ. 1,00,359 ಜನರು ಮೃತಪಟ್ಟಿದ್ದಾರೆ.