ಲಂಡನ್:ಕೋಟ್ಯಾಂತರ ಭಾರತೀಯರು ದೀಪಾವಳಿಯನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ಎಂದು ಆಚರಿಸುತ್ತಾರೆ. ಕೊರೊನಾ ವೈರಸ್ನ ಕತ್ತಲೆಯಂತಹ ಪ್ರಸ್ತುತ ದಿನಗಳಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು, 'ಬೆಳಕಿನ ಹಬ್ಬ ದೀಪಾವಳಿ, ಜಗತ್ತಿಗೆ ಹಬ್ಬಿದ ಕೋವಿಡ್ನ ಕತ್ತಲು ಹೊಡೆದೋಡಿಸಲಿ' ಎಂಬ ಸಂದೇಶ ರವಾನಿಸಿದ್ದಾರೆ.
ವರ್ಚ್ಯುವಲ್ ದೀಪಾವಳಿ ಉತ್ಸವದ ನಡುವೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ನಿವಾರಣೆಯ ಬಗ್ಗೆ ಆಶಾವಾದದ ಸಂದೇಶ ಹಂಚಿಕೊಂಡ ಬೋರಿಸ್ ಜಾನ್ಸನ್, ಕತ್ತಲೆಯ ಮೇಲಿನ ಬೆಳಕು ಮತ್ತು ಕೆಟ್ಟದ್ದರ ಮೇಲಿನ ಒಳ್ಳೆಯದ ಸಂಕೇತವಾದ ವಿಜಯದ ದೀಪಾವಳಿಯ ಮನೋಭಾವವನ್ನು ಶ್ಲಾಘನೀಯ ಎಂದರು.
ನಿಸ್ಸಂದೇಹವಾಗಿ ಮುಂದೆ ದೊಡ್ಡ ಸವಾಲುಗಳಿವೆ. ಆದರೆ, ದೇಶಾದ್ಯಂತದ ಜನರ ಸ್ಥಿತಿ ಮತ್ತು ಅವರು ಸಂಕಷ್ಟ ಪರಿಹರಿಸುವಿಕೆಯ ಪ್ರಜ್ಞೆಯಲ್ಲಿ ನನಗೆ ವಿಶ್ವಾಸವಿದೆ. ಒಟ್ಟಾಗಿ ನಾವು ಈ ವೈರಸ್ ಅನ್ನು ಜಯಿಸುತ್ತೇವೆ. ದೀಪಾವಳಿ ನಮಗೆ ಕಲಿಸುವಂತೆಯೇ ಕತ್ತಲೆಯ ಮೇಲೆ ಬೆಳಕು ಜಯಿಸುತ್ತದೆ. ಕೆಟ್ಟದ್ದರ ಮೇಲೆ ಒಳ್ಳೆಯದಕ್ಕೆ ಗೆಲುವಿದೆ. ಅಜ್ಞಾನದ ಮೇಲೆ ಜ್ಞಾನ ಸವಾರಿ ಮಾಡುತ್ತದೆ ಎಂದು ಬೋರಿಸ್ ಜಾನ್ಸನ್ ಲಂಡನ್‌ನ 10 ಡೌನಿಂಗ್ ಸ್ಟ್ರೀಟ್‌ನಿಂದ ಹೇಳಿದರು.
ಲಾರ್ಡ್ ರಾಮ ಮತ್ತು ಅವನ ಹೆಂಡತಿ ಸೀತಾ ದೇವಿ ಅವರು ರಾಕ್ಷಸ ರಾಜನಾದ ರಾವಣನನ್ನು ಸೋಸಿಲಿದ ನಂತರ ಮನೆಗೆ ತೆರಳುತ್ತಿದ್ದಂತೆ, ಅವರು ಸಾಗುಗುತ್ತಿದ್ದ ದಾರಿಯಲ್ಲಿ ಹಲವು ಲಕ್ಷಾಂತರ ದೀಪಗಳು ಬೆಳಗುತ್ತಿದ್ದವು. ಹಾಗೆಯೇ ನಾವು ಈ ಮೂಲಕ ನಮ್ಮ ದಾರಿಯನ್ನು ಕಂಡುಕೊಳ್ಳುತ್ತೇವೆ. ನಾವು ಅದನ್ನು (ಕೋವಿಡ್) ಗೆದ್ದು ವಿಜಯಶಾಲಿ ಆಗುತ್ತೇವೆ ಎಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ.
ದೀಪಾವಳಿ ಆಚರಣೆಗೆ ಶ್ರೀ ರಾಮ ರಾವಣನನ್ನು ಕೊಂದು ಸೀತಾ ಸಮೇತನಾಗಿ ಆಯ್ಯೋಧ್ಯಾಗೆ ಆಗಮಿಸಿದ್ದ. ಅಯ್ಯೋಧ್ಯೆ ಪ್ರವೇಶಿಸುತ್ತಿದ್ದಂತೆ ಅಯೋಧ್ಯೆಯ ಪ್ರಜೆಗಳು ಹಾಗೂ ಸೀತಾ ರಾಮ ಬಂಧುಗಳು ಒಂದು ದೊಡ್ಡ ಉತ್ಸವ ಮಾಡಿ ಅದ್ಧೂರಿಯಾಗಿ ದೀಪ ಹಚ್ಚಿ ರಾಮ-ರಾವಣರ ಯುದ್ಧ ವಿಜಯವನ್ನು ಸಂಭ್ರಮಿಸಿದ್ದರು ಎಂಬುದು ಪ್ರತೀತಿ ಇದೆ. ಇದನ್ನೇ ಬ್ರಿಟನ್ ಪ್ರಧಾನಿ ಅವರು ಕೊರೊನಾ ವಿರುದ್ಧ ಗೆಲ್ಲೋಣ ಎಂದು ರೂಪಕವಾಗಿ ಹೇಳಿದರು.