ಬರ್ಕ್‌ಶೈರ್(ಲಂಡನ್):ಮೈಸೂರು ಹುಲಿ ಟಿಪ್ಪು ಸುಲ್ತಾನ್‌ಗೆ ಸೇರಿದ ಅಪರೂಪದ ಕಲಾಕೃತಿಗಳು, ಆಯುಧಗಳು ಲಂಡನ್‌ನಲ್ಲಿ ಹರಾಜಾಗಿವೆ. ಬರ್ಕ್‌ಶೈರ್ ಸಿಟಿಯಲ್ಲಿ ಟಿಪ್ಪು ಆಯುಧಗಳು ಮತ್ತು ಅಪರೂಪದ ಕಲಾಕೃತಿಗಳನ್ನ ಹರಾಜು ನಡೆಸಲಾಗಿದೆ.
4ನೇ ಆಂಗ್ಲೋ-ಮೈಸೂರು ಯುದ್ಧ:
1798-99ರಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜತೆ 4ನೇ ಆಂಗ್ಲೋ-ಮೈಸೂರು ಯುದ್ಧ ನಡೆದಿತ್ತು. ಆ ಯುದ್ಧದಲ್ಲಿ ಟಿಪ್ಪು ವೀರಮರಣವನ್ನಪ್ಪಿದ್ದ. ಆಗ ಯುದ್ಧಭೂಮಿಯಲ್ಲಿ ಟಿಪ್ಪು ಬಳಿಯಿದ್ದ ಅಪರೂಪದ ಕಲಾಕೃತಿಗಳು ಮತ್ತು ಆಯುಧಗಳನ್ನ ಅಂದಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಗಿನ ಮೇಜರ್ ಥಾಮಸ್ ಹರ್ಟ್ ವಶಕ್ಕೆ ಪಡೆದಿದ್ದ. ಅವುಗಳನ್ನ ಬಳಿಕ ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋಗಿದ್ದ ಬ್ರಿಟಿಷ್ ಅಧಿಕಾರಿ ಥಾಮಸ್ ಹರ್ಟ್. ಆಗಿನ ಬ್ರಿಟಿಷ್ ಅಧಿಕಾರಿ ತಂದಿದ್ದ ಬೆಲೆ ಕಟ್ಟಲಾಗದ ಕಲಾಕೃತಿಗಳನ್ನ ಬರ್ಕ್‌ಶೈರ್‌ನಲ್ಲಿ ಆ ಮನೆಯೊಂದರಲ್ಲಿ ಪೀಳಿಗೆಯಿಂದ ಪೀಳಿಗೆಗೆ ಕಾಪಾಡಿಕೊಂಡು ಬರಲಾಗಿದೆ. ಅವುಗಳನ್ನ ದಂಪತಿ ಈಗ ಹರಾಜಿಗೆ ಇಟ್ಟಿದ್ದರು. ವಿಶೇಷ ಅಂದ್ರೇ ಪ್ರತಿಯೊಂದು ವಸ್ತುಗಳ ಮೇಲೂ ಹುಲಿಯ ಚಿತ್ರಗಳಿವೆ. ಟಿಪ್ಪು ಮೈಸೂರು ಹುಲಿ ಅನ್ನೋದನ್ನ ಇವು ಸಾರಿ ಹೇಳ್ತಿವೆ.
ಹರಾಜಿಗಿಡಲಾಗಿದ್ದ ಆಯುಧ, ಕಲಾಕೃತಿಗಳು :
- ಹುಲಿಯ ಹಿಡಿಕೆಯ ಗನ್
- ಹೈದರ್ ಅಲಿಯ ಬಂಗಾರದ ಕಟ್ಟಿನ ಖಡ್ಗ, ಇದಕ್ಕೆ ಹೈದರ್ ಸಿಂಬಲ್ ಇದೆ.
- ಬಂಗಾರ ಲೇಪಿತ ಮೂರು ಖಡ್ಗ
- ಕೋವಿ ಈಟಿ
- 3 ಹರಳಿನ ಬಂಗಾರದ ಪೆಟ್ಟಿಗೆಯೂ ಸೇರಿ 8 ಕಲಾಕೃತಿಗಳು
220 ವರ್ಷಗಳಿಂದ ಲಂಡನ್‌ನ ಒಂದು ಮನೆಯಲ್ಲಿ ಹಾಗೇ ಕೊಳೆಯುತ್ತಿರುವುದು ಬೇಜಾರು. ಆದರೆ, ಇವುಗಳನ್ನ ನೋಡಲು ಖುಷಿಯಾಗುತ್ತೆ ಅಂತಾ ಆ್ಯಂಟೋನಿ ಕ್ರಿಬ್ ಕಂಪನಿಯ ಲಿಲಾವುಗಾರ ಆ್ಯಂಟೋನಿ ಕ್ರಿಬ್ ಹೇಳಿದ್ದಾರೆ. ಈ ಕಂಪನಿ ಆಯುಧ ಮತ್ತು ಶಸ್ತ್ರಗಳನ್ನ ಹರಾಜು ನಡೆಸುತ್ತದೆ. ಕಳೆದ ಜನವರಿಯಲ್ಲಷ್ಟೇ ಈ ಅಪರೂಪದ ಕಲಾಕೃತಿಗಳನ್ನ ಸೇಲ್ ಮಾಡುವುದಾಗಿ ಬರ್ಕ್‌ಶೈರ್‌ನಲ್ಲಿರುವ ದಂಪತಿ ನನ್ನ ಭೇಟಿಯಾಗಿ ಹೇಳಿದ್ದರು.
ಅದರಂತೆ ಈಗ ಹರಾಜು ಇಡಲಾಗಿದೆ. ಅಸಲಿಗೆ ಇವುಗಳಿಗೆ ಬೆಲೆ ಕಟ್ಟೋದೇ ತಪ್ಪು ಅಂತಾರೆ ಆ್ಯಂಟೋನಿ ಕ್ರಿಬ್. ಟಿಪ್ಪು ಗನ್ ಹೈಲೆಟ್ ಜತೆಗೆ ಆತನ ಯುದ್ಧದ ವೇಳೆ ತೊಡುವ ಬಟ್ಟೆಯೂ ಹರಾಜಿನಲ್ಲಿ ಗಮನ ಸೆಳೆದಿದೆ. ಟಿಪ್ಪು ತನ್ನ ಆತ್ಮರಕ್ಷಣೆಗಾಗಿ ಗನ್ ಇರಿಸಿಕೊಂಡಿದ್ದ ಅನ್ನೋದು ಸ್ಪಷ್ಟ. ಬಂಗಾರದ ಪೆಟ್ಟಿಗೆ ಈಸ್ಟ್ ಇಂಡಿಯಾ ಕಂಪನಿಯ ಮುದ್ರೆಯೂ ಕೂಡ ಇತ್ತು. 18ನೇ ಶತಮಾನದ ಟಿಪ್ಪು ಸುಲ್ತಾನ್ ಗೋಲ್ಡ್ ರಿಂಗ್‌ನ 2014ರಲ್ಲಿ 1 ಕೋಟಿ 32 ಲಕ್ಷ ರೂ. ಹರಾಜಾಗಿತ್ತು. ಮುಂದೆ ಅದೇ ರಿಂಗ್ 2016ರಲ್ಲಿ 54.62 ಕೋಟಿ ರೂ.ಗೆ ಸೇಲಾಗಿತ್ತು.