ಕರ್ನಾಟಕ

karnataka

ETV Bharat / international

ಉದ್ಯಮಿ ವಿಜಯ್​ ಮಲ್ಯ ದಿವಾಳಿ: ಲಂಡನ್​ ಹೈಕೋರ್ಟ್ ಮಹತ್ವದ ಘೋಷಣೆ - ಮದ್ಯದ ದೊರೆ ವಿಜಯ್ ಮಲ್ಯ

Vijay Mallya bankrupt: ಮದ್ಯದ ದೊರೆ, ಉದ್ಯಮಿ ವಿಜಯ್​ ಮಲ್ಯ ದಿವಾಳಿಯಾಗಿದ್ದಾರೆಂದು ಲಂಡನ್​ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

Vijay Mallya
Vijay Mallya

By

Published : Jul 26, 2021, 9:34 PM IST

ಯಕೆ(ಲಂಡನ್​):ಭಾರತೀಯ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಎಸಗಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ 'ದಿವಾಳಿ' ಎಂದು ಲಂಡನ್ ಹೈಕೋರ್ಟ್​​ ಘೋಷಣೆ ಮಾಡಿದೆ. ಇದರಿಂದ ಭಾರತೀಯ ಬ್ಯಾಂಕ್​ಗಳಿಗೆ ದೊಡ್ಡಮಟ್ಟದ ಗೆಲುವು ಸಿಕ್ಕಿದೆ. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಸಹಭಾಗಿತ್ವದ ಭಾರತೀಯ ಬ್ಯಾಂಕ್​ಗಳ ಒಕ್ಕೂಟವು ಇದೀಗ ಕಿಂಗ್​ಫಿಶರ್​ ಏರ್​ಲೈನ್ಸ್​ಗೆ ನೀಡಿದ ಸಾಲದಿಂದ ಹಣ ವಸೂಲು ಮಾಡಲು ಸಹಕಾರಿಯಾಗಲಿದೆ.

ಲಂಡನ್​ ಹೈಕೋರ್ಟ್​ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಲು ಮುಂದಾಗಿದ್ದರು. ಆದರೆ ಅದಕ್ಕೆ ಅನುಮತಿ ನಿರಾಕರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ವರ್ಷದ ಆರಂಭದಲ್ಲಿ ತನ್ನ ಕಂಪನಿಗಳು ದಿವಾಳಿಯಾಗಿವೆ ಎಂದು ತಿದ್ದುಪಡಿ ಮಾಡಬೇಕೆಂದು ದೇಶ ಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಲಂಡನ್ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಅಲ್ಲಿನ ಹೈಕೋರ್ಟ್​ ಭಾರತೀಯ ಬ್ಯಾಂಕುಗಳ ಒಕ್ಕೂಟದ ಪರವಾಗಿ ತೀರ್ಪು ನೀಡಿತ್ತು. ಈ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟವು ವಿಜಯ್ ಮಲ್ಯ ಅವರ ಕಾರ್ಯನಿರ್ವಹಿಸದ ಕಿಂಗ್‌ಫಿಶರ್ ಏರ್‌ಲೈನ್ಸ್‌ ಸಾಲವನ್ನು ವಸೂಲಿ ಮಾಡುವ ವಿಚಾರದಲ್ಲಿ ಮುನ್ನಡೆ ಸಾಧಿಸಿದ್ದವು.

ಇದನ್ನೂ ಓದಿ: ಅಸ್ಸೋಂ-ಮಿಜೋರಾಂ ಗಡಿಯಲ್ಲಿ ಹಿಂಸಾಚಾರ: ಆರು ಯೋಧರು ಹುತಾತ್ಮ, ಹಲವರಿಗೆ ಗಾಯ

ಮಲ್ಯ ಭಾರತದಲ್ಲಿ ಸಾಲಗಾರರಾಗಿರುವುದರಿಂದ, ಭಾರತದಲ್ಲಿ ಅವರು ಹೊಂದಿರುವ ಆಸ್ತಿಗಳ ಮೇಲಿನ ಭದ್ರತೆಯನ್ನು ರದ್ದುಪಡಿಸಿ ಸಾಲ ವಸೂಲಾತಿಗೆ ಸಹಕರಿಸಬೇಕು ಎಂದು ಬ್ಯಾಂಕ್‌ಗಳು ಹೈಕೋರ್ಟ್‌ ಮೊರೆ ಹೋಗಿದ್ದವು.

ABOUT THE AUTHOR

...view details