ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಸಾವಿರಾರು ಕೋಟಿ ರೂ ಕೊಳ್ಳೆ ಹೊಡೆದು, ಇಂಗ್ಲೆಂಡ್ನಲ್ಲಿ ಸಿಕ್ಕಿಬಿದ್ದಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಅಲ್ಲಿನ ನ್ಯಾಯಾಲಯ ಜೂನ್ 27ರವರೆಗೆ ಜೈಲುಶಿಕ್ಷೆ ವಿಸ್ತರಿಸಿದೆ.
ನೈರುತ್ಯ ಲಂಡನ್ನ ವಂಡ್ಸ್ವರ್ತ್ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನೀರವ್ ಮೂರನೇ ಬಾರಿ ಸಲ್ಲಿಸಿದ ಜಾಮೀನು ಕೋರಿಕೆಯೂ ತಿರಸ್ಕೃತಗೊಂಡಿದೆ. ವೆಸ್ಟ್ಮಿನ್ ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಮ್ಮ ಅರ್ಬುತ್ನಾಟ್ ಈ ಆದೇಶ ನೀಡಿದ್ದಾರೆ.