ಲಂಡನ್ :ಹೌಸ್ ಆಫ್ ಕಾಮನ್ಸ್ನಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ಭಾರತ ಮೂಲದ ಯುಕೆ ವ್ಯವಹಾರಗಳ ಕಾರ್ಯದರ್ಶಿ ಅಲೋಕ್ ಶರ್ಮಾ ಅವರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ಭಾರತ ಮೂಲದ ಯುಕೆ ವ್ಯವಹಾರ ಕಾರ್ಯದರ್ಶಿಯ ಕೊರೊನಾ ವರದಿ ನೆಗೆಟಿವ್
ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆ ಸ್ವಯಂ ಐಸೋಲೇಷನ್ಗೆ ಒಳಗಾಗಿದ್ದ ಭಾರತ ಮೂಲದ ಯುಕೆ ವ್ಯವಹಾರಗಳ ಕಾರ್ಯದರ್ಶಿ ಅಲೋಕ್ ಶರ್ಮಾ ಅವರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ಯುಕೆಯ ವ್ಯವಹಾರಗಳ ಕಾರ್ಯದರ್ಶಿ ಅಲೋಕ್ ಶರ್ಮಾ
ಕಾರ್ಪೊರೇಟ್ ಆಡಳಿತ ಮತ್ತು ದಿವಾಳಿತನ ಮಸೂದೆ ಓದುತ್ತಿರುವಾಗಲೇ ಕೊರೊನಾ ರೋಗಲಕ್ಷಣ ಕಂಡು ಬಂದ ಹಿನ್ನೆಲೆ ಶರ್ಮಾ ಸ್ವಯಂ ಐಸೋಲೇಷನ್ಗೆ ಒಳಗಾಗಿದ್ದರು ಎಂದು ಮೆಟ್ರೋ ಪತ್ರಿಕೆ ವರದಿ ಮಾಡಿದೆ. ವರದಿ ನಗೆಟಿವ್ ಬಂದ ಹಿನ್ನೆಲೆ ಶರ್ಮಾ ಐಸೋಲೇಷನ್ನಿಂದ ಹೊರ ಬರಲಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶರ್ಮಾ, ಕಳೆದ 24 ಗಂಟೆಗಳ ಅವಧಿಯಲ್ಲಿ ನನ್ನ ಬಗ್ಗೆ ಕಾಳಜಿ ವಹಿಸಿ ಸಂದೇಶ ರವಾನಿಸಿದವರು ಬೆಂಬಲ ನೀಡಿದ ಸಂಸದೀಯ ಅಧಿಕಾರಿಗಳು ಮತ್ತು ಸ್ಪೀಕರ್ಗೆ ಧನ್ಯವಾದಗಳು ಎಂದಿದ್ದಾರೆ.