ಕರ್ನಾಟಕ

karnataka

ಜನರ ಮೇಲೆ ಲಸಿಕೆ ಪ್ರಯೋಗ ಆರಂಭಿಸಿದ ಬ್ರಿಟನ್​... ಗರಿಗೆದರಿದ ಆಶಾಭಾವನೆ

ಆರೋಗ್ಯವಂತರ ಮೇಲೆ ಪ್ರಯೋಗ ನಡೆಸಲು ಬೇಕಾದ ಒಂದು ಡಸನ್​ ವ್ಯಾಕ್ಸಿನ್​ಗಳು ಪ್ರಾಯೋಗಿಕ ಹಂತಕ್ಕೆ ಬಂದಿದೆ. ಈ ವ್ಯಾಕ್ಸಿನ್​ ​ಯಶಸ್ವಿಯಾಗುತ್ತದೆ ಎಂಬ ಖಾತರಿಯಿಲ್ಲ. ಆದರೂ ವರ್ಷಾಂತ್ಯದ ವೇಳೆಗೆ ಕೆಲವರು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಆರೋಗ್ಯವಂತರಾಗಬಹುದು ಎಂಬ ಭರವಸೆ ಹೆಚ್ಚಿದೆ.

By

Published : Jun 17, 2020, 2:08 PM IST

Published : Jun 17, 2020, 2:08 PM IST

Vaccine
ಲಸಿಕೆ

ಲಂಡನ್:ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಪರಿಣಾಮಕಾರಿ ಲಸಿಕೆ ಹುಡುಕುವಲ್ಲಿ ಇಂಗ್ಲೆಂಡ್​ ಮುಂಚೂಣಿಯತ್ತ ಸಾಗಿದೆ. ಲಂಡನ್‌ನ ಇಂಪೀರಿಯಲ್ ಕಾಲೇಜಿನ ವಿಜ್ಞಾನಿಗಳು, ಜನತೆ ವೈರಸ್ ಹೊಡೆತದಿಂದ ಮುಕ್ತರಾಗಲು ತಯಾರಿಸಲಾದ ರೋಗನಿರೋಧಕ ಲಸಿಕೆಯನ್ನು ಈ ವಾರದಿಂದ ಪ್ರಾಯೋಗಿಕವಾಗಿ ನೀಡಲು ಪ್ರಾರಂಭಿಸಿದ್ದಾರೆ.

ಆರಂಭದಲ್ಲಿ ಆರೋಗ್ಯವಂತ ಸಾವಿರಾರು ಜನರ ಮೇಲೆ ಪ್ರಯೋಗ ನಡೆಸಲು ಬೇಕಾದ ಒಂದು ಡಸನ್​ ವ್ಯಾಕ್ಸಿನ್​ಗಳು ಪ್ರಾಯೋಗಿಕ ಹಂತಕ್ಕೆ ಬಂದಿದೆ. ಈ ವ್ಯಾಕ್ಸಿನ್​ ​ಯಶಸ್ವಿಯಾಗುತ್ತದೆ ಎಂಬ ಖಾತರಿಯಿಲ್ಲ. ಆದರೂ ವರ್ಷಾಂತ್ಯದ ವೇಳೆಗೆ ಕೆಲವರು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಆರೋಗ್ಯವಂತರಾಗಬಹುದು ಎಂಬ ಭರವಸೆ ಹೆಚ್ಚಿದೆ.

ಈಗಾಗಲೇ ಕನಿಷ್ಠ 82 ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ವಿಶ್ವಾದ್ಯಂತ 4,46,000 ಕ್ಕಿಂತಲೂ ಹೆಚ್ಚು ಜನರನ್ನು ಕೊಂದ ಈ ವೈರಸ್​ ಅನ್ನು ಪರಿಣಾಮಕಾರಿ ಲಸಿಕೆಯೊಂದಿಗೆ ಮಾತ್ರ ನಿಲ್ಲಿಸಬಹುದು ಎಂದು ಅನೇಕ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹೀಗಾಗಿ ಲಸಿಕೆಯ ಪರಿಣಾಮಕಾರಿ ಅಭಿವೃದ್ಧಿಗೆ ವರ್ಷಗಳೇ ಬೇಕಾಗುತ್ತದೆ ಎಂದು ಹೇಳಲಾಗಿದೆ.

ಇಂಪೀರಿಯಲ್‌ ಕಾಲೇಜಿನಲ್ಲಿ ಅಭಿವೃದ್ಧಿಪಡಿಸಿದ ಕೋವಿಡ್​-19 ಲಸಿಕೆಯ ಎರಡು ಡೋಸ್‌ಗಳಿಂದ ಸುಮಾರು 300 ಆರೋಗ್ಯವಂತ ಜನರಿಗೆ ರೋಗನಿರೋಧಕ ಶಕ್ತಿ ನೀಡಲಾಗುವುದು ಎಂದು ಬ್ರಿಟಿಷ್ ಸರ್ಕಾರ ತಿಳಿಸಿದೆ. ಈ ವ್ಯಾಕ್ಸಿನ್​ ಅನ್ನು ಸರ್ಕಾರದ 41 ಮಿಲಿಯನ್ ಪೌಂಡ್‌ಗಳ (51 ಮಿಲಿಯನ್ ಯುಎಸ್ ಡಾಲರ್) ನೆರವಿನಿಂದ ತಯಾರಿಸಲಾಗಿದೆ.

ABOUT THE AUTHOR

...view details