ಇಸ್ತಾಂಬುಲ್: ವಿಶ್ವದ ಅಗ್ರ ರಾಷ್ಟ್ರಗಳೂ ಸೇರಿದಂತೆ ಬಹುತೇಕ ಎಲ್ಲ ದೇಶಗಳ ಮೇಲೂ ತನ್ನ ಅಭಿಪ್ರಾಯ ಹೇರಿಕೆ ಮಾಡುವ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕದ ಮಾತಿಗೆ ಟರ್ಕಿ ಕವಡೆ ಕಾಸಿನ ಬೆಲೆ ನೀಡುತ್ತಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟರ್ಕಿ ಅಧ್ಯಕ್ಷರಿಗೆ ಬರೆದ ಪತ್ರವನ್ನು ನಿರ್ದಾಕ್ಷಿಣ್ಯವಾಗಿ ಹರಿದು ಎಸೆದಿದ್ದಾರೆ. ಈ ಮೂಲಕ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗಾನ್, ಟ್ರಂಪ್ ಮಾತನ್ನು ತಳ್ಳಿಹಾಕಿದ್ದಾರೆ.