ಮಾಸ್ಕೋ(ರಷ್ಯಾ):ದಿನದಿಂದ ದಿನಕ್ಕೆ ಉಕ್ರೇನ್ ಸ್ಥಿತಿ ಗಂಭೀರವಾಗುತ್ತಿದ್ದು, ರಷ್ಯಾದ ಆಕ್ರಮಣ ಮುಂದುವರೆದಿದೆ. ಹೀಗಾಗಿ ಯೂರೋಪಿನ ಮೂರು ದೇಶಗಳ ಪ್ರಧಾನಿ ಮಂತ್ರಿಗಳು ಉಕ್ರೇನ್‌ಗೆ ಆಗಮಿಸಿದ್ದು, ರಾಜಧಾನಿ ಕೀವ್ನತ್ತ ತೆರಳಿದ್ದಾರೆ ಎಂದು ಪೋಲೆಂಡ್ ಪ್ರಧಾನಮಂತ್ರಿಗಳ ಕಚೇರಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಪೋಲೆಂಡ್ ಪ್ರಧಾನಿ ಮಾಟ್ಯೂಸ್ಜ್ ಮೊರಾವಿಕಿ ಮತ್ತು ಉಪ ಪ್ರಧಾನಿ ಜರೋಸ್ಲಾವ್ ಕಾಸಿನ್ಸ್ಕಿ, ಜೆಕ್ ರಾಷ್ಟ್ರದ ಪ್ರಧಾನಿ ಪೆಟ್ರ್ ಫಿಯಾಲಾ ಮತ್ತು ಸ್ಲೊವೇನಿಯಾದ ಪ್ರಧಾನಿ ಜಾನೆಜ್ ಜಾನ್ಸಾ ಅವರು ಉಕ್ರೇನ್‌ಗೆ ಆಗಮಿಸಿ ಕೀವ್‌ಗೆ ತೆರಳಿದ್ದಾರೆ ಎಂದು ಪೋಲೆಂಡ್ ಮಾಹಿತಿ ನೀಡಿದೆ.
ಸುಮಾರು ಒಂದು ಗಂಟೆಯ ಹಿಂದೆ, ಪ್ರಧಾನಿ, ಉಪ ಪ್ರಧಾನಮಂತ್ರಿ ಜರೋಸ್ಲಾವ್ ಕಾಸಿನ್ಸ್ಕಿ ಮತ್ತು ಜೆಕ್ ರಿಪಬ್ಲಿಕ್ ಮತ್ತು ಸ್ಲೊವೇನಿಯಾದ ಪ್ರಧಾನ ಮಂತ್ರಿಗಳಿರುವ ರೈಲು ಪೋಲೆಂಡ್-ಉಕ್ರೇನಿಯನ್ ಗಡಿಯನ್ನು ದಾಟಿದೆ ಎಂದು ಪೋಲೆಂಡ್ ಪ್ರಧಾನಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ ಎಂದು ಆರ್ಟಿ ಸುದ್ದಿ ಸಂಸ್ಥೆ ವರದಿ ಮಾಡಿದೆ.