ಕೀವ್(ಉಕ್ರೇನ್): ಉಕ್ರೇನ್-ರಷ್ಯಾ ನಡುವಿನ ಸಂಘರ್ಷ ಎರಡನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳನ್ನ ಗುರಿಯಾಗಿಸಿಕೊಂಡು ರಷ್ಯಾ ಮಿಲಿಟರಿ ಪಡೆ ದಾಳಿ ನಡೆಸುತ್ತಿದೆ. ಪರಿಣಾಮ ಈಗಾಗಲೇ ನೂರಾರು ಯೋಧರು ಸೇರಿದಂತೆ ಅನೇಕ ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಇದರ ಮಧ್ಯೆ ಉಕ್ರೇನ್ನ ದ್ವೀಪವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 13 ಯೋಧರನ್ನ ರಷ್ಯಾ ಮಿಲಿಟರಿ ಪಡೆ ಹೊಡೆದುರುಳಿಸಿದೆ. ದಾಳಿ ನಡೆಯುವುದಕ್ಕೂ ಮುಂಚಿತವಾಗಿ ಉಭಯ ದೇಶಗಳ ಯೋಧರ ನಡುವೆ ನಡೆದಿರುವ ಸಂಭಾಷಣೆ ವೈರಲ್ ಆಗಿದೆ.
ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗತಿಯಾಗುವಂತೆ ರಷ್ಯಾ ಯೋಧರು ಮನವಿ ಮಾಡಿದ್ದು, ಇದಕ್ಕೆ ಉಕ್ರೇನ್ ಯೋಧರು ನಿರಾಕರಣೆ ಮಾಡಿದ್ದಕ್ಕಾಗಿ ರಷ್ಯಾ ಯುದ್ಧ ನೌಕೆ ದಾಳಿ ನಡೆಸಿ ಹತ್ಯೆಗೈದಿದೆ ಎಂದು ತಿಳಿದು ಬಂದಿದೆ. ಶರಣಾಗತಿಯಾಗುವಂತೆ ತಿಳಿಸುತ್ತಿದ್ದಂತೆ ರಷ್ಯಾ ಮಿಲಿಟರಿ ಪಡೆಯ ಮನವಿ ತಿರಸ್ಕಾರ ಮಾಡಿ, ಅವರನ್ನ ನಿಂದನೆ ಮಾಡಿದ್ದರಿಂದ ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಪರಿಣಾಮ ಎಲ್ಲ 13 ಉಕ್ರೇನ್ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ದಾಳಿ ನಡೆಯುವುದಕ್ಕೂ ಮುಂಚಿತವಾಗಿ ಉಕ್ರೇನ್ ಯೋಧರು ಹಾಗೂ ರಷ್ಯಾ ಮಿಲಿಟರಿ ಪಡೆಗಳ ನಡುವಿನ ಸಂಭಾಷಣೆ ರೆಕಾರ್ಡ್ ಆಗಿದ್ದು, ಇದೀಗ ಎಲ್ಲೆಡೆ ವೈರಲ್ ಆಗ್ತಿದೆ.
ಇದನ್ನೂ ಓದಿರಿ:ಉಕ್ರೇನ್ ನಡುವಿನ ಯುದ್ಧದಲ್ಲಿ 450 ರಷ್ಯನ್ ಸೈನಿಕರು ಮೃತ : ಬ್ರಿಟನ್ ಮಾಹಿತಿ
ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡುತ್ತಿದ್ದಂತೆ ಉಕ್ರೇನ್ ರಾಜಧಾನಿ ಕೀವ್, ಬಾರ್ಕೇವಾ, ಒಡೆಸಾ, ಕ್ರಾಮಬೋರೆಸ್ಕ್ ಸೇರಿದಂತೆ ಪ್ರಮುಖ ನಗರಗಳನ್ನ ಗುರಿಯಾಗಿಸಿಕೊಂಡು ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು, ಇಲ್ಲಿಯವರೆಗೆ ನೂರಾರು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ನಿರ್ಗತಿಕರಾಗಿದ್ದಾರೆ. ರಷ್ಯಾ ನಡೆ ಖಂಡಿಸಿ ಪ್ರತಿಭಟನೆ ಸಹ ನಡೆಯುತ್ತಿದ್ದು, ರಷ್ಯಾದಲ್ಲೇ ಪ್ರತಿಭಟನಾ ನಿರತ ಸಾವಿರಕ್ಕೂ ಅಧಿಕ ಜನರನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.