1933ರಲ್ಲಿ, ಯುರೋಪಿನಲ್ಲಿ ಯಹೂದಿ ಜನಸಂಖ್ಯೆಯು 9 ದಶಲಕ್ಷಕ್ಕೂ ಅಧಿಕವಾಗಿತ್ತು. ಎರಡನೆಯ ಮಹಾಯುದ್ಧದ ಸಮಯದಲ್ಲಿ ನಾಜಿ ಜರ್ಮನಿ ಆಕ್ರಮಿಸಿಕೊಂಡ ಮತ್ತು ಪ್ರಭಾವ ಬೀರಿದ ದೇಶಗಳಲ್ಲಿ ಹೆಚ್ಚಿನ ಯುರೋಪಿಯನ್ ಯಹೂದಿಗಳು ವಾಸಿಸುತ್ತಿದ್ದರು. 1945ರಲ್ಲಿ ಎರಡನೇ ಮಹಾಯುದ್ಧದ ಅಂತ್ಯದ ವೇಳೆಗೆ, ಜರ್ಮನ್ನರು ಮತ್ತು ಅವರ ಮಿತ್ರರಾಷ್ಟ್ರಗಳು, ಸಹಯೋಗಿಗಳು "ಅಂತಿಮ ಪರಿಹಾರ" ಎಂಬ ಶೀರ್ಷಿಕೆಯಿಟ್ಟು ಪ್ರತಿ ಮೂರು ಯುರೋಪಿಯನ್ ಯಹೂದಿಗಳಲ್ಲಿ ಇಬ್ಬರನ್ನು(3/2) ಕೊಂದರು.
ಗ್ರೀಕ್ ಪದಗಳಾದ “ಹೋಲೋಸ್” (ಸಂಪೂರ್ಣ) ಮತ್ತು “ಕೌಸ್ಟೋಸ್” (ಹತ್ಯಾಕಾಂಡ) ಎಂಬ ಪದವನ್ನು ಐತಿಹಾಸಿಕವಾಗಿ ಬಲಿಪೀಠದ ಮೇಲೆ ಬಳಸಲಾಯಿತು.
1933 ರಿಂದ 1945ರ ನಡುವೆ ಜರ್ಮನ್ನಲ್ಲಿ ನಾಜಿ ಆಡಳಿತವಿತ್ತು. ಈ ಸಂದರ್ಭದಲ್ಲಿ “ಹೋಲೋಸ್” ಮತ್ತು “ಕೌಸ್ಟೋಸ್” ಪದವು ಹೊಸ ಮತ್ತು ಭಯಾನಕ ಅರ್ಥವನ್ನು ಪಡೆದುಕೊಂಡಿತು. ಸೈದ್ಧಾಂತಿಕ ಮತ್ತು ವ್ಯವಸ್ಥಿತ ರಾಜ್ಯ ಪ್ರಾಯೋಜಿತ ಕಾನೂನು ಕ್ರಮ ಮತ್ತು ಲಕ್ಷಾಂತರ ಯುರೋಪಿಯನ್ ಯಹೂದಿಗಳ ಸಾಮೂಹಿಕ ಹತ್ಯೆ ನಡೆಯಿತು. ಈ ಹತ್ಯೆಯಲ್ಲಿ ಜಿಪ್ಸಿಗಳು, ದಿವ್ಯಾಂಗರು, ಭಿನ್ನಮತೀಯರು ಮತ್ತು ಸಲಿಂಗಕಾಮಿಗಳು ಸೇರಿದಂತೆ ಲಕ್ಷಾಂತರ ಜನರು ಹತ್ಯೆಗೀಡಾಗಿದ್ದರು.
ಜರ್ಮನಿಯಲ್ಲಿ ಹಲವಾರು ವರ್ಷಗಳ ಕಾಲ ಹಿಟ್ಲರ್ ಆಳ್ವಿಕೆಯ ನಾಜಿ ಸರ್ಕಾರ ಯಹೂದಿಗಳನ್ನು ನಿರಂತರ ಕಿರುಕುಳಕ್ಕೀಡು ಮಾಡಿತ್ತು. ಇನ್ನು 2ನೇ ಮಹಾಯುದ್ಧದ ಅಂತ್ಯದಲ್ಲಿ "ಅಂತಿಮ ಪರಿಹಾರ" ಎಂಬ ಕಾನ್ಸೆಪ್ಟ್ ಭಯಾನಕತೆಯನ್ನು ಸೃಷ್ಟಿಸಿತ್ತು. ಇನ್ನು ಆಕ್ರಮಿತ ಪೋಲೆಂಡ್‌ನ ಕಾನ್ಸಂಟ್ರೇಶನ್ ಕ್ಯಾಂಪ್‌ಗಳಲ್ಲಿ ಸಾಮೂಹಿಕ ಹತ್ಯೆ ಕೇಂದ್ರಗಳನ್ನು ನಿರ್ಮಿಸಲಾಯಿತು.
ಒಟ್ಟು ಸಾವು-ನೋವುಗಳು: ಜನಾಂಗೀಯ, ರಾಜಕೀಯ, ಸೈದ್ಧಾಂತಿಕ ಮತ್ತು ನಡವಳಿಕೆಯ ಕಾರಣಗಳಿಗಾಗಿ ಸುಮಾರು 6 ಮಿಲಿಯನ್ ಯಹೂದಿಗಳು ಮತ್ತು ಸುಮಾರು 5 ಮಿಲಿಯನ್ ಇತರರು ಹತ್ಯಾಕಾಂಡಕ್ಕೆ ಬಲಿಯಾದರು. ನಾಶವಾದವರಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು ಇದ್ದರು.
ಯಹೂದಿಗಳ ವಿರುದ್ಧ ದ್ವೇಷಕ್ಕಾಗಿ ಹಿಟ್ಲರ್ ನಿರೂಪಿಸಿದ ಅನುಯಾಯಿಗಳು: 1889ರಲ್ಲಿ ಆಸ್ಟ್ರಿಯಾದಲ್ಲಿ ಜನಿಸಿದ ಅನುಯಾಯಿಗಳು, ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಜರ್ಮನ್ ಸೈನ್ಯದಲ್ಲಿ ಸೇವೆ ಸಲ್ಲಿಸಿದರು. ಬಳಿಕ ಜರ್ಮನಿಯ ಅನೇಕ ಯಹೂದಿ ವಿರೋಧಿಗಳಂತೆ, ಇವರು ಸಹ 1918ರಲ್ಲಿ ದೇಶಕ್ಕಾದ ಸೋಲಿಗೆ ಯಹೂದಿಗಳೇ ಕಾರಣವೆಂದು ದೂಷಿಸಿದರು.
ಯುದ್ಧ ಮುಗಿದ ಕೂಡಲೇ, ಹಿಟ್ಲರ್ ನ್ಯಾಷನಲ್ ಜರ್ಮನ್ ವರ್ಕರ್ಸ್ ಪಾರ್ಟಿಗೆ ಸೇರಿದನು. ಅದು ನ್ಯಾಷನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ (ಎನ್ಎಸ್ಡಿಎಪಿ) ಆಗಿ ಮಾರ್ಪಟ್ಟಿತು. ಇದನ್ನು ಇಂಗ್ಲಿಷ್ನಲ್ಲಿ ನಾಜಿ ಎಂದು ಕರೆಯಲಾಗುತ್ತದೆ.
1923ರಲ್ಲಿ ನಡೆದ ಬಿಯರ್ ಹಾಲ್ ಪುಷ್‌ನಲ್ಲಿ ಹಿಟ್ಲರ್ ಕೈವಾಡವಿದೆ ಎಂಬ ಆರೋಪದಿಂದ ಆತನನ್ನು ಜೈಲಿನಲ್ಲಿರಿಸಲಾಗಿತ್ತು. ಆ ಸಂದರ್ಭದಲ್ಲಿ ಆತ "ಮೆನ್ ಕ್ಯಾಂಪ್" ಎಂಬ ಆತ್ಮಚರಿತ್ರೆ ಬರೆದನು. ಈ ಪುಸ್ತಕದಲ್ಲಿ ಯುರೋಪಿಯನ್ ಯುದ್ಧದ ಬಗ್ಗೆ ಉಲ್ಲೇಖಿಸಿದ್ದಾನೆ. ಮತ್ತು ಜರ್ಮನಿ ಯಹೂದಿ ಜನಾಂಗದ ನಿರ್ನಾಮಕ್ಕೆ ಕಾರಣವಾಗುತ್ತದೆ ಎಂದು ಬರೆದಿದ್ದಾನೆ.
1940ರ ಸಂದರ್ಭದಲ್ಲಿ ಜರ್ಮನ್ ಸೈನ್ಯವು ಯುರೋಪಿನಲ್ಲಿ ಹಿಟ್ಲರ್ನ ಸಾಮ್ರಾಜ್ಯವನ್ನು ವಿಸ್ತರಿಸಿತು. ಡೆನ್ಮಾರ್ಕ್, ನಾರ್ವೆ, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಲಕ್ಸೆಂಬರ್ಗ್ ಮತ್ತು ಫ್ರಾನ್ಸ್ ಅನ್ನು ವಶಪಡಿಸಿಕೊಂಡಿತು. 1941ರಿಂದ ಯಹೂದಿಗಳು ಮತ್ತು ನೂರಾರು ಸಾವಿರ ಯುರೋಪಿಯನ್ ಜಿಪ್ಸಿಗಳನ್ನು ಪೊಲೀಸ್ ಘೆಟ್ಟೋಗಳಿಗೆ ಸಾಗಿಸಲಾಯಿತು. ಜೂನ್, 1941ರಲ್ಲಿ ಸೋವಿಯತ್ ಒಕ್ಕೂಟದ ಜರ್ಮನಿಯ ಆಕ್ರಮಣವು ಯುದ್ಧದಲ್ಲಿ ಹೊಸ ಮಟ್ಟದ ಕ್ರೂರತೆಯನ್ನು ಗುರುತಿಸಿತು.
ಜರ್ಮನ್ ಆಕ್ರಮಣದ ಅವಧಿಯಲ್ಲಿ ಐನ್ಸಾಟ್ಜ್ ಗ್ರುಪೆನ್‌ವಾಲ್ಡ್ ಎಂಬ ಕೊಲ್ಲುವ ಘಟಕಗಳಿಗೆ ಸುಮಾರು 5,00,000 ಕ್ಕೂ ಹೆಚ್ಚು ಸೋವಿಯತ್ ಯಹೂದಿಗಳು ಮತ್ತು ಇತರರನ್ನು ಕಳುಹಿಸಕೊಟ್ಟು ಅವರನ್ನು ಶೂಟ್ ಮಾಡುವ ಮೂಲಕ ಮಾರಣಹೋಮ ನಡೆಸಲಾಯಿತು.
1942-1944ರಲ್ಲಿ ಕೊಲ್ಲುವ ಕೇಂದ್ರಗಳಿಗೆ ಗಡಿಪಾರು: ಜರ್ಮನಿ ಮತ್ತು ಜರ್ಮನ್ ಆಕ್ರಮಿತ ಯುರೋಪಿನ ಯಹೂದಿಗಳನ್ನು ರೈಲು ಮೂಲಕ ಆಕ್ರಮಿತ ಪೋಲೆಂಡ್‌ನ ಹತ್ಯಾ ಕೇಂದ್ರಗಳಿಗೆ ಗಡಿಪಾರು ಮಾಡಲಾಯಿತು. ಗಡಿಪಾರು ಮಾಡುವಿಕೆಯನ್ನು "ಪೂರ್ವಕ್ಕೆ ಪುನರ್ವಸತಿ" ಎಂದು ಕರೆಯುತ್ತಿದ್ದರು. ಅಷ್ಟೇ ಅಲ್ಲದೆ, ಇಂತಹ ನಾಮಕರಣದ ಬಳಿಕ ಜರ್ಮನ್ನರು ತಮ್ಮ ಉದ್ದೇಶಗಳನ್ನು ಮರೆಮಾಚಲು ಪ್ರಯತ್ನಿಸಿದ್ದರು. ಮೊದಲು ಯಹೂದಿಗಳನ್ನು ಕಾರ್ಮಿಕ ಶಿಬಿರಗಳಿಗೆ ಕರೆದೊಯ್ಯಬೇಕು ಎಂದು ಸುಳ್ಳು ಹೇಳಿ ಬಳಿಕ ಕೊಲ್ಲುವ ಕೇಂದ್ರಗಳಿಗೆ ಸಾಗಿಸಿ ಅಲ್ಲಿ ಅವರನ್ನು ಹತ್ಯೆ ಮಾಡಲಾಗುತ್ತಿತ್ತು.
ಹತ್ಯಾಕಾಂಡದ ಮರಣ ಶಿಬಿರಗಳು, 1941-1945: 1941ರ ಉತ್ತರಾರ್ಧದಲ್ಲಿ, ಕಡಿಮೆ ಉಪಯುಕ್ತರು (ಕೆಲಸಕ್ಕೆ ಅಗತ್ಯವಿಲ್ಲದವರು) ಎಂದು ಪರಿಗಣಿಸಿದ ಜನರನ್ನು ಜರ್ಮನ್ನರು ಪೋಲೆಂಡ್‌ನ ಘೆಟ್ಟೋಗಳಲ್ಲಿದ್ದ ಕಾನ್ಸಂಟ್ರೇಶನ್ ಕ್ಯಾಂಪ್‌ಗಳಿಗೆ ಕಳುಹಿಸಿ ಸಾಮೂಹಿಕ ಹತ್ಯೆ ನಡೆಸುತ್ತಿದ್ದರು. ಮಾರ್ಚ್ 17, 1942ರಂದು ಲುಬ್ಲಿನ್ ಬಳಿಯ ಬೆಲ್ಜೆಕ್ ಶಿಬಿರದಲ್ಲಿ ಮೊದಲ ಸಾಮೂಹಿಕ ಅನಿಲ ಸೋರಿಕೆ ನಡೆಸಿ ಅನೇಕರನ್ನು ಕೊಲ್ಲಲಾಯಿತು. ಆಕ್ರಮಿತ ಪೋಲೆಂಡ್‌ನ ಶಿಬಿರಗಳಲ್ಲಿ ಇನ್ನೂ ಐದು ಸಾಮೂಹಿಕ ಹತ್ಯೆ ಕೇಂದ್ರಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಚೆಲ್ಮ್ನೊ, ಸೋಬಿಬೋರ್, ಟ್ರೆಬ್ಲಿಂಕಾ, ಮಜ್ದನೆಕ್ ಮತ್ತು ಎಲ್ಲಕ್ಕಿಂತ ದೊಡ್ಡದಾದ ಕೇಂದ್ರ.
1942ರಿಂದ 1945ರವರೆಗೆ, ಯಹೂದಿಗಳನ್ನು ಯುರೋಪಿನ ಎಲ್ಲೆಡೆಯಿಂದ ಶಿಬಿರಗಳಿಗೆ ಗಡಿಪಾರು ಮಾಡಲಾಯಿತು. ಇದರಲ್ಲಿ ಜರ್ಮನ್ ನಿಯಂತ್ರಿತ ಪ್ರದೇಶ ಮತ್ತು ಜರ್ಮನಿಯೊಂದಿಗೆ ಮೈತ್ರಿ ಮಾಡಿಕೊಂಡ ದೇಶಗಳು ಸೇರಿವೆ.
ಗಡಿಪಾರು, ರೋಗ ಮತ್ತು ನಿರಂತರ ಹಸಿವಿನಿಂದ ಬೇಸತ್ತ ವಾರ್ಸಾ ಘೆಟ್ಟೋ ನಿವಾಸಿಗಳು ಸಶಸ್ತ್ರ ದಂಗೆ ಎದ್ದರು. ಏಪ್ರಿಲ್ 19ರಿಂದ ಮೇ 16, 1943ರವರೆಗೆ ವಾರ್ಸಾ ಘೆಟ್ಟೋ ದಂಗೆಯು 7,000 ಯಹೂದಿಗಳ ಸಾವಿನಲ್ಲಿ ಕೊನೆಗೊಂಡಿತು. 50,000 ಬದುಕುಳಿದವರನ್ನು ನಿರ್ನಾಮ ಶಿಬಿರಗಳಿಗೆ ಕಳುಹಿಸಲಾಯಿತು. ಆದರೆ ಪ್ರತಿರೋಧ ಹೋರಾಟಗಾರರು ಸುಮಾರು ಒಂದು ತಿಂಗಳ ಕಾಲ ನಾಜಿಗಳನ್ನು ತಡೆಹಿಡಿದಿದ್ದರು. ಮತ್ತು ಅವರ ದಂಗೆ ಜರ್ಮನ್ ಆಕ್ರಮಿತ ಯುರೋಪಿನಾದ್ಯಂತ ಶಿಬಿರಗಳು ಮತ್ತು ಘೆಟ್ಟೋಗಳ ದಂಗೆಗಳಿಗೆ ಪ್ರೇರಣೆ ನೀಡಿತು.
ಶಿಬಿರಗಳ ಕಾರ್ಯಾಚರಣೆಯನ್ನು ರಹಸ್ಯವಾಗಿಡಲು ನಾಜಿಗಳು ಪ್ರಯತ್ನಿಸಿದರೂ, ಹತ್ಯೆಯ ಪ್ರಮಾಣವು ಇದನ್ನು ಅಸಾಧ್ಯವಾಗಿಸಿತು.ನಪ್ರತ್ಯಕ್ಷದರ್ಶಿಗಳು ಪೋಲೆಂಡ್ನಲ್ಲಿನ ನಾಜಿ ದೌರ್ಜನ್ಯದ ವರದಿಗಳನ್ನು ಮಿತ್ರರಾಷ್ಟ್ರ ಸರ್ಕಾರಗಳ ಮುಂದಿಟ್ಟರು. ಇದಾದ ಬಳಿಕ ನಾಜಿಗಳು ಘಟನೆಯ ಕುರಿತು ಮಾಹಿತಿ ನೀಡಲು ಅಸಹಾಯಕರಾದರು. ಅಷ್ಟೇ ಅಲ್ಲದೆ, ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಗೊಂಡಿತು.
ಯೂಹೂದಿ ಮತ್ತು ಯಹೂದ್ಯೇತರ ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಹ ಅದರಲ್ಲಿ ಯಹೂದಿಗಳನ್ನು ವಿಷಾನಿಲ ತುಂಬಿದ್ದ ಕೊಠಡಿಯಲ್ಲಿ ಹಾಕಿ ಕೊಲ್ಲಲಾಯಿತು. ಆದರೆ ಇತರರು ಹಸಿವು, ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದರು.