ರೊಮೇನಿಯಾ (ಉಕ್ರೇನ್): ಉಕ್ರೇನ್ನಲ್ಲಿ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದ್ದಂತೆ ಅಲ್ಲಿರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ತವರನ್ನು ಸೇರಲು ತವಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಮೊದಲ ಬ್ಯಾಚ್ನಲ್ಲಿ ಭಾರತೀಯ ವಿದ್ಯಾರ್ಥಿಗಳು ಚೆರ್ನಿವ್ಟ್ಸಿಯಿಂದ ಉಕ್ರೇನ್ - ರೊಮೇನಿಯಾ ಗಡಿಗೆ ತೆರಳಿದ್ದಾರೆ. ಈ ಮೂಲಕ ತವರಿಗೆ ಬರಲಿದ್ದಾರೆ.
ಎಂಇಎ ಕ್ಯಾಂಪ್ ಕಚೇರಿಗಳು ಪಶ್ಚಿಮ ಉಕ್ರೇನ್‌ನ ಎಲ್ವಿವ್ ಮತ್ತು ಚೆರ್ನಿವ್ಟ್ಸಿ ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ರಷ್ಯನ್ ಮಾತನಾಡುವ ಅಧಿಕಾರಿಗಳನ್ನು ಈ ಶಿಬಿರದ ಕಚೇರಿಗಳಿಗೆ ಕಳುಹಿಸಲಾಗುತ್ತಿದೆ.
ಮೊದಲ ಬ್ಯಾಚ್ನಲ್ಲಿ ಭಾರತೀಯ ವಿದ್ಯಾರ್ಥಿಗಳು ಚೆರ್ನಿವ್ಟ್ಸಿಯಿಂದ ಉಕ್ರೇನ್ - ರೊಮೇನಿಯಾ ಗಡಿಗೆ ತೆರಳಿದ್ದಾರೆ
ಇದನ್ನೂ ಓದಿ: ಅಪ್ಪಾ, ಅಮ್ಮಾ 'ಐ ಲವ್ ಯೂ'... ವೈರಲ್ ಆಯ್ತು ಉಕ್ರೇನ್ ಯೋಧನ ಭಾವುಕ ವಿಡಿಯೋ
8 ಕಿ.ಮೀ. ನಡಿಗೆ:ಎಲ್ವಿವ್‌ನ ಡೇನ್‌ಲೋ ಹ್ಯಾಲಿಟ್‌ಸ್ಕಿ ವೈದ್ಯಕೀಯ ವಿಶ್ವವಿದ್ಯಾಲಯದ ಸುಮಾರು 40 ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ - ಪೋಲೆಂಡ್ ಗಡಿಯತ್ತ ಸಾಗುತ್ತಿದ್ದು, ಗಡಿಯಿಂದ 8 ಕಿಲೋ ಮೀಟರ್ ದೂರದಲ್ಲೇ ವಿದ್ಯಾರ್ಥಿಗಳನ್ನು ಡ್ರಾಪ್ ಮಾಡಲಾಗಿದೆ. ಇವರೆಲ್ಲ ಇಂದು ಪೋಲೆಂಡ್ ತಲುಪಲಿದ್ದು, ಅಲ್ಲಿಂದ ಹಂಗೇರಿ ರಾಜಧಾನಿ ಬುಡಾಪೆಸ್ಟ್ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತಕ್ಕೆ ಮರಳಲಿದ್ದಾರೆ.
ಇಲ್ಲಿಂದ ಆಗಮಿಸುವ ಎಲ್ಲ ವಿದ್ಯಾರ್ಥಿಗಳ ಪ್ರಯಾಣ ವೆಚ್ಚವನ್ನು ಭಾರತ ಸರ್ಕಾರವೇ ಭರಿಸಲಿದೆ. ಈ ಸಂಬಂಧ ಭಾರತೀಯ ರಾಯಭಾರ ಕಚೇರಿ, ಉಕ್ರೇನ್, ಹಂಗೇರಿ, ಪೋಲೆಂಡ್ ಹಾಗೂ ರೊಮೆನಿಯಾ ಸರ್ಕಾರಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಭಾರತೀಯರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ವ್ಯವಸ್ಥೆ ಮಾಡಿದೆ.