ಕೀವ್ (ಉಕ್ರೇನ್): ಶತ್ರು ರಾಷ್ಟ್ರ ರಷ್ಯಾದ 'ವಿಧ್ವಂಸಕ ಗುಂಪುಗಳು' ಉಕ್ರೇನ್ ರಾಜಧಾನಿ ಕೀವ್ ಅನ್ನು ಪ್ರವೇಶಿಸಿದ್ದು, ಜನರು ಜಾಗರೂಕರಾಗಿರಿ ಮತ್ತು ಕರ್ಫ್ಯೂ ನಿಯಮಗಳನ್ನು ಪಾಲಿಸಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ.
ವಿಡಿಯೋ ಸಂದೇಶವನ್ನು ನೀಡಿರುವ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಆಕ್ರಮಣಕಾರರ ವಿರುದ್ಧ ನಮ್ಮ ಪಡೆಗಳು ಹೋರಾಡುತ್ತಿದ್ದು, ಇಂತಹ ವೇಳೆಯಲ್ಲಿ ತಾವು ಕೀವ್ನಲ್ಲೇ ಉಳಿಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.