ಕರ್ನಾಟಕ

karnataka

ETV Bharat / international

ನೋಡಿ: ರಷ್ಯಾದ ಭೀಕರ ದಾಳಿಗೆ ಉಕ್ರೇನ್‌ ​ತತ್ತರ, ಕೀವ್‌ನಲ್ಲಿ ವಾಣಿಜ್ಯ ಕಟ್ಟಡಗಳು ಧ್ವಂಸ - ಉಕ್ರೇನ್​ ಕೀವ್ ಮೇಲೆ ರಷ್ಯಾ ದಾಳಿ

ಉಕ್ರೇನ್​ ಮೇಲೆ ರಷ್ಯಾ ಸೇನಾ ಪಡೆ ನಡೆಸುತ್ತಿರುವ ನಿರಂತರ ದಾಳಿಗೆ ರಾಜಧಾನಿ ಕೀವ್ ನಗರ​ ಸಂಪೂರ್ಣವಾಗಿ ತತ್ತರಿಸಿದೆ. ಬಹುತೇಕ ಪುರಾತನ ಕಟ್ಟಡಗಳು ಈಗಾಗಲೇ ನೆಲಕಚ್ಚಿವೆ. ಅಪಾರ ಪ್ರಮಾಣದ ಕಷ್ಟನಷ್ಟವನ್ನು ವಿವರಿಸುವ ವಿಡಿಯೋ ಇಲ್ಲಿದೆ.

Russian strikes in several areas of Kyiv in Ukraine
Russian strikes in several areas of Kyiv in Ukraine

By

Published : Mar 2, 2022, 6:55 PM IST

ಕೀವ್​​(ಉಕ್ರೇನ್​​):ಉಕ್ರೇನ್​​ನ ವಿವಿಧ ನಗರಗಳ ರಷ್ಯಾ ಶೆಲ್​, ಬಾಂಬ್‌ಗಳ ಸುರಿಮಳೆಗಯ್ಯುತ್ತಿದೆ. ಈ ಭಯಾನಕ ಮಿಲಿಟರಿ ಕಾರ್ಯಾಚರಣೆಗೆ ಅನೇಕ ಪುರಾತನ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು ನೆಲಸಮವಾಗುತ್ತಿವೆ.

ಉಕ್ರೇನ್​ ಮೇಲೆ ರಷ್ಯಾ ಘನಘೋರ ದಾಳಿಗೆ ಕೀವ್​​ ತತ್ತರ

ಕೀವ್​ನಲ್ಲಿರುವ ವಿಶ್ವವಿದ್ಯಾಲಯ, ಜನವಸತಿ ಕಟ್ಟಡಗಳು, ಸಾರ್ವಜನಿಕ ಸ್ಥಳಗಳ ಮೇಲೆಲ್ಲೂ ನಿರಂತರವಾಗಿ ಶೆಲ್​ ದಾಳಿ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಲಭ್ಯವಾಗಿರುವ ಈ ವಿಡಿಯೋದಲ್ಲಿ ಧ್ವಂಸವಾಗಿರುವ ಕಟ್ಟಡದ ಅವಶೇಷಗಳನ್ನು ಕಾಣಬಹುದು. ಜಿಮ್‌ ಕೇಂದ್ರವೊಂದರಲ್ಲಿರುವ ಸಲಕರಣೆಗಳೆಲ್ಲಾ ಸುಟ್ಟು ಕರಕಲಾಗಿವೆ. ಕಟ್ಟಡಗಳ ಹೊರಭಾಗಗಳೆಲ್ಲಾ ಶೆಲ್‌ ದಾಳಿಗೆ ಛಿದ್ರವಾಗಿದೆ. ರಸ್ತೆಗಳೆಲ್ಲಾ ಯುದ್ಧ ಭೀಕರತೆಯನ್ನೇ ತೋರಿಸುತ್ತವೆ.

ABOUT THE AUTHOR

...view details