ಮೆಲ್ಬರ್ನ್: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ನ ಅರ್ಹತಾ ಸುತ್ತಿನ ವೇಳೆ ಬಾಲ್ ಗರ್ಲ್ ಬಳಿ ಬಾಳೆ ಹಣ್ಣಿನ ಸಿಪ್ಪೆ ಬಿಡಿಸುವಂತೆ ಹೇಳಿ ಫ್ರೆಂಚ್ ಟೆನಿಸ್ ಆಟಗಾರ ಎಲಿಯಟ್ ಬೆಂಚೆಟ್ರಿಟ್ ವಿವಾದಕ್ಕೆ ಒಳಗಾಗಿದ್ದಾರೆ.
21 ವರ್ಷದ ಯುವ ಟೆನಿಸ್ ಆಟಗಾರ ಎಲಿಯಟ್ ಬೆಂಚೆಟ್ರಿಟ್ಗೆ ಆಟದ ವಿರಾಮದ ಸಮಯದಲ್ಲಿ ಬಾಳೆಹಣ್ಣನ್ನು ನೀಡಲಾಗಿದೆ. ಆದರೆ ಬೆಂಚೆಟ್ರಿಟ್ ಬೆರಳಿಗೆ ಗಾಯವಾಗಿದ್ದು, ಪ್ಲಾಸ್ಟರ್ ಹಾಕಿಕೊಂಡಿದ್ದರಿಂದ ಆತ ಬಾಲ್ ಗರ್ಲ್ ಬಳಿ ಬಾಳೆ ಹಣ್ಣಿನ ಸಿಪ್ಪೆ ಬಿಡಿಸುವಂತೆ ಕೇಳಿದ್ದಾನೆ. ಇದನ್ನು ನೋಡಿದ ಅಂಪೈರ್, ತಾನೇ ಬಿಡಿಸಿಕೊಳ್ಳುವಂತೆ ಬೆಂಚೆಟ್ರಿಟ್ಗೆ ಸೂಚಿಸಿದ್ದಾರೆ. ಬಳಿಕ ಬೆಂಚೆಟ್ರಿಟ್, ಬಾಯಿಯಿಂದ ಹಣ್ಣಿನ ಸಿಪ್ಪೆ ಬಿಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.