ಮರಿಯುಪೋಲ್(ಉಕ್ರೇನ್):ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಆರಂಭವಾಗಿ 14 ದಿನಗಳ ಕಳೆದಿವೆ. ಆದರೂ ಇನ್ನು ಯುದ್ಧ ನಿಂತಿಲ್ಲ. ಆದರೆ ಉಕ್ರೇನ್ ಪ್ರಜೆಗಳ ಸ್ಥಿತಿ ಶೋಚನಿಯವಾಗಿದೆ. ನೀರು - ಆಹಾರ ಇಲ್ಲದೇ ನರಕಯಾತನೆ ಅನುಭವಿಸುತ್ತಿದ್ದಾರೆ.
ಮರಿಯುಪೋಲ್ ನಗರದ ಬೀದಿ-ಬೀದಿಗಳಲ್ಲಿ ಶವಗಳು ಬಿದ್ದಿವೆ. ಹಸಿದ ಜನರು ಆಹಾರಕ್ಕಾಗಿ ಅಂಗಡಿಗಳಿಗೆ ನುಗ್ಗುತ್ತಿದ್ದಾರೆ. ಹಿಮವನ್ನು ಕರಗಿಸಿ ನೀರು ಕುಡಿಯುತ್ತಿದ್ದಾರೆ. ಈ ಆಯಕಟ್ಟಿನ ಬಂದರು ನಗರವನ್ನು ಬಡಿಯುವ ರಷ್ಯಾದ ಶೆಲ್‌ಗಳ ಶಬ್ದಕ್ಕೆಸಾವಿರಾರು ಜನರು ನೆಲಮಾಳಿಗೆಯ ಕತ್ತಲಲ್ಲಿ ಜೀವನ ಕಳೆಯುತ್ತಿದ್ದಾರೆ.
ನೆಲ ಮಾಳಗೆಯ ಎಣ್ಣೆ ದೀಪದ ಅಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಮಧ್ಯೆ ಕುಳಿತಕೊಂಡ ಮಹಿಳೆಯೊಬ್ಬರು, ಬಾವುಕರಾಗಿ ನಾನೇಕೆ ಅಳಬಾರದು?, ನನಗೆ ನನ್ನ ಮನೆ ಬೇಕು. ನನಗೆ ನನ್ನ ಕೆಲಸ ಬೇಕು. ನಾನು ಜನರ ಬಗ್ಗೆ ಮತ್ತು ನಗರದ ಬಗ್ಗೆ ಹಾಗೂ ಮಕ್ಕಳ ಬಗ್ಗೆ ತುಂಬಾ ದುಃಖಿತನಾಗಿದ್ದೇನೆ ಎಂದು ನೊಂದಿದ್ದಾರೆ.