ಬಡಲೋನಾ(ಸ್ಪೇನ್): ಸ್ಪೇನ್‌ನಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದ್ದರಿಂದ, ಕ್ಯಾಟಲೋನಿಯಾದ ಈಶಾನ್ಯ ಪ್ರದೇಶದ ಆಸ್ಪತ್ರೆಯು ತನ್ನ ಗ್ರಂಥಾಲಯವನ್ನು ತೀವ್ರ ನಿಗಾ ಘಟಕ(ICU)ವನ್ನಾಗಿ ಪರಿವರ್ತಿಸಿದೆ.
ಹೃದಯ ಸಂಬಂದಿ ಚಿಕಿತ್ಸೆಗೆಂದು ನಿರ್ಮಿಸಲಾದ ಈ ಆಸ್ಪತ್ರೆಯ ಹೊಚ್ಚಹೊಸ ಪ್ರದೇಶವನ್ನು ಸಹ ಉದ್ಘಾಟಿಸುವ ಮೊದಲೇ COVID-19 ICU ಆಗಿ ಪರಿವರ್ತಿಸಲಾಗಿದೆ.
ಬಾರ್ಸಿಲೋನಾದ ಟ್ರಯಾಸ್ ಐ ಪೂಜೋಲ್ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ ಸೂಕ್ತ ರಕ್ಷಣಾ ಸಾಧನಗಳಿಲ್ಲದೆ ಹೆಣಗಾಡುತ್ತಿದ್ದಾರೆ. ಕೇವಲ ಪ್ಲಾಸ್ಟಿಕ್ ಏಪ್ರನ್‌ಗಳ ಮೂಲಕ ರೋಗಿಗಳಿಕೆ ಚಿಕಿತ್ಸೆ ನೀಡುತ್ತಿದ್ದಾರೆ.
ಬುಧವಾರ ಒಂದೇ ದಿನ ಸ್ಪೇನ್‌ನಲ್ಲಿ 864 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 9,053 ಕ್ಕೆ ತಲುಪಿದೆ ಎಂದು ಸ್ಪೇನ್ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈವರೆಗೆ ಒಟ್ಟು 102,136 ಜನರಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದೆ.