ಮ್ಯಾಡ್ರಿಡ್(ಸ್ಪೇನ್):ಕೊರೊನಾ ವಿರುದ್ಧ ಹೋರಾಡಲು ಇಡೀ ದೇಶವನ್ನೇ ಬಂದ್ ಮಾಡಿದ್ದರೂ ವೈರಸ್ಗೆ ತುತ್ತಾದವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಹಾಗೆ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಅವರ ಪತ್ನಿ ಬೆಗೊನಾ ಗೊಮೆಜ್ ಅವರಿಗೂ ಕೊರೊನಾ ಸೋಂಕು ತಗುಲಿದೆ.
ಸ್ಪೇನ್ ಪ್ರಧಾನಿ ಪತ್ನಿಗೂ ತಗುಲಿದ ಕೊರೊನಾ ಸೋಂಕು! - ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಅವರ ಪತ್ನಿ ಬೆಗೊನಾ ಗೊಮೆಜ್ ಅವರಲ್ಲಿ ಕೊರೊನಾ ವೈರೆಸ್
ಜಗತ್ತಿನಾದ್ಯಂತ ಸಾರ್ವಜನಿಕರ ತಲ್ಲಣಕ್ಕೆ ಕಾರಣವಾಗಿರುವ ಮಹಾಮಾರಿ ಕೊರೊನಾ ವೈರಸ್ ಸುಮಾರು 93 ರಾಷ್ಟ್ರಗಳಲ್ಲಿ ವ್ಯಾಪಿಸಿದ್ದು, 1 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಸ್ಪ್ಯಾನಿಷ್ ಪ್ರಧಾನಿ ಪತ್ನಿಗೂ ಕೊರೊನಾ ಸೋಂಕು
ಬೆಗೊನಾ ಗೊಮೆಜ್ ಅವರ ಸೋಂಕು ಪರೀಕ್ಷಾ ವರದಿ ಪಾಸಿಟಿವ್ ಬಂದಿದ್ದು, ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುತ್ತಿರುವುದಾಗಿ ಪ್ರಧಾನಿ ಕಚೇರಿಯು ಮಾಹಿತಿ ನೀಡಿದೆ.
ಇದುವರೆಗೆ ಸ್ಪೇನ್ನಲ್ಲಿ 6,391 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಈ ಮಹಾಮಾರಿಯಿಂದ 517 ಜನ ಚೇತರಿಸಿಕೊಂಡಿದ್ದರೆ, 196 ಮಂದಿ ಬಲಿಯಾಗಿದ್ದಾರೆ.