ಮ್ಯಾಡ್ರಿಡ್(ಸ್ಪೇನ್): ಕಳೆದ 24 ಗಂಟೆಗಳಲ್ಲಿ 864 ಜನ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಸ್ಪೇನ್‌ನಲ್ಲಿ ವೈರಸ್ನಿಂದ ಸಾವಿನ ಸಂಖ್ಯೆ ಬುಧವಾರ 9,000ದ ಗಡಿ ದಾಟಿದೆ.
ಸೋಂಕಿತರ ಸಂಖ್ಯೆಯೂ ಒಂದು ಲಕ್ಷದ ಗಡಿ ದಾಟಿದ್ದು, 1,02,136ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ.

ಜಗತ್ತಿನಲ್ಲೇ ಇಟಲಿಯ ನಂತರ ಸ್ಪೇನ್ ಎರಡನೇ ಅತಿ ಹೆಚ್ಚು ಕೊರೊನಾ ಸಾವಿನ ಸಂಖ್ಯೆಯನ್ನು ಹೊಂದಿದೆ. ಮಾರಕ ವೈರಸ್ ಇಲ್ಲಿಯವರೆಗೆ 9,053 ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಹೊಸ ಸೋಂಕಿತರ ಪ್ರಮಾಣ ಕೆಳಮುಖವಾಗುತ್ತಿರುವುದು ಕೊಂಚ ಸಮಾಧಾನವಾಗುವ ಅಂಶ ಎಂದು ಸ್ಪೇನ್ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಸದ್ಯ ಅಮೆರಿಕಾದಲ್ಲಿ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇಟಲಿ ಹಾಗೂ ಸ್ಪೇನ್ ನಂತರದ ಸ್ಥಾನದಲ್ಲಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಇಟಲಿ ಮುಂಚೂಣಿಯಲ್ಲಿದ್ದು, ಸ್ಪೇನ್ ನಂತರ ಯುಎಸ್ಎ ಇದೆ.