ಲಂಡನ್:ಕಳೆದ ವರ್ಷದ ಜುಲೈ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ನಲ್ಲಿ ಸೋಮವಾರ ಒಬ್ಬರೂ ಕೂಡ ಕೋವಿಡ್ಗೆ ಬಲಿಯಾಗಿಲ್ಲ.
ಯುಕೆ ಆರೋಗ್ಯ ಅಧಿಕಾರಿಗಳ ಪ್ರಕಾರ, ಯುನೈಟೆಡ್ ಕಿಂಗ್ಡಮ್ನಲ್ಲಿ ಮೇ 10 ರಂದು 2,357 ಹೊಸ ಪ್ರಕರಣಗಳು ಮತ್ತು 4 ಸಾವುಗಳು ವರದಿಯಾಗಿವೆ. ಮೃತಪಟ್ಟ ಈ ನಾಲ್ಕೂ ಸೋಂಕಿತರು ವೇಲ್ಸ್ನವರು. ಆದರೆ ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡ್ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ.
ಯುನೈಟೆಡ್ ಕಿಂಗ್ಡಮ್ನಲ್ಲಿ ಕೊರೊನಾ ಸಾವು-ನೋವಿನಲ್ಲಿ ಭಾರಿ ಇಳಿಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿರುವ ಇಂಗ್ಲೆಂಡ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಪ್ರೊಫೆಸರ್ ಕ್ರಿಸ್ ವಿಟ್ಟಿ, ಸಾರ್ವಜನಿಕರು, ಅಧಿಕಾರಿಗಳು ಮತ್ತು ವ್ಯಾಕ್ಸಿನೇಷನ್ ಕಾರ್ಯಕ್ರಮದ ಪ್ರಯತ್ನಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.