ಮಿಲಾನ್ (ಇಟಲಿ):ಇಟಲಿಯ ದೇಶೀಯ ಫುಟ್ಬಾಲ್ ಸ್ಪರ್ಧೆಯ ಸರಣಿ ಎ ಯಲ್ಲಿ ಆಡುವ ಆಟಗಾರರಿಗೆ ಮೇ 4 ರಿಂದ ವೈಯಕ್ತಿಕ ತರಬೇತಿಯನ್ನು ಪುನರಾರಂಭಿಸಲು ಅವಕಾಶ ನೀಡಲಾಗುವುದು ಎಂದು ಇಟಾಲಿಯನ್ ಸರ್ಕಾರ ಖಚಿತಪಡಿಸಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅತೀ ಹೆಚ್ಚು ಹಾನಿಗೊಳಗಾದ ದೇಶಗಳ ಸಾಲಿನಲ್ಲಿರುವ ಇಟಾಲಿ ಇನ್ನೂ ಚೇತರಿಸಿಕೊಂಡಿಲ್ಲ. ಈ ಹಿನ್ನೆಲೆ ಮಾರ್ಚ್ 18ರಿಂದ ಶುರುವಾಗಬೇಕಿದ್ದ ಫುಟ್ಬಾಲ್ ಸರಣಿ ಎ ಗುಂಪು ತರಬೇತಿಯನ್ನು ಅಮಾನತುಗೊಳಿಸಲಾಗಿದೆ. ಆದಾಗ್ಯೂ, ನಿರ್ಬಂಧಿತ ಕ್ರಮಗಳನ್ನು ನಿಧಾನವಾಗಿ ಸಡಿಲಿಸಲು ಯೋಚಿಸುತ್ತಿದ್ದೇನೆ ಎಂದು ಇಟಲಿಯ ಪ್ರಧಾನಿ ಗೈಸೆಪೆ ಕಾಂಟೆ ಹೇಳಿದ್ದಾರೆ.