ಮಾಸ್ಕೋ (ರಷ್ಯಾ): ಉಕ್ರೇನ್ನಲ್ಲಿ ರಷ್ಯಾ ಆಕ್ರಮಣ ಹೆಚ್ಚಿರುವ ನಡುವೆಯೇ ರಷ್ಯಾದ ನೌಕಾಪಡೆಯ ಹಿರಿಯ ನೌಕಾ ಕಮಾಂಡರ್ ಸಾವನ್ನಪ್ಪಿದ್ಧಾರೆ. ಕ್ಯಾಪ್ಟನ್ ಆಂಡ್ರೆ ಪಾಲಿಯ್ ಮೃತ ಕಮಾಂಡರ್ ಆಗಿದ್ಧಾರೆ.
ರಷ್ಯಾದ ಕಪ್ಪು ಸಮುದ್ರ ನೌಕಾಪಡೆಯ ಕಮಾಂಡರ್ ಆಗಿದ್ದ ಆಂಡ್ರೆ ಪಾಲಿಯ್ ಉಕ್ರೇನ್ನ ಮರಿಯುಪೋಲ್‌ನಲ್ಲಿ ನಡೆದ ಹೋರಾಟದಲ್ಲಿ ಮೃತಪಟ್ಟಿದ್ದಾರೆ ಎಂದು ಸೆವಾಸ್ಟೊಪೋಲ್ ಗವರ್ನರ್ ಮಿಖಾಯಿಲ್ ರಜ್ವೋಜಯೇವ್ ಹೇಳಿದ್ದಾರೆ.