ಕೈವ್(ಉಕ್ರೇನ್): ರಾಷ್ಟ್ರದಲ್ಲಿ ರಷ್ಯಾದ ಆಕ್ರಮಣ ತೀವ್ರಗತಿಯಲ್ಲಿ ಸಾಗುತ್ತಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿನ ಭೀಕರ ವ್ಯವಸ್ಥೆಬಗ್ಗೆ ತಿಳಿದು ಬರುತ್ತಿದೆ. ಈ ದುರಂತದಲ್ಲಿ ವಿಡಿಯೋವೊಂದು ಸಾಕಷ್ಟು ಸದ್ದು ಮಾಡುತ್ತಿದೆ.
ಉಕ್ರೇನ್ ನಾಗರೀಕರೊಬ್ಬರು ಕಾರಿನಲ್ಲಿ ಹೋಗುವಾದ ದಿಡೀರನೇ ಕಾರಿನ ಮೇಲೆ ರಷ್ಯಾ ಸೈನಿಕರು ಟ್ಯಾಂಕರ್ ಹಾಯಿಸಿದ್ದಾರೆ. ಅದೃಷ್ಟವಶಾತ್ ಕಾರ್ನಲ್ಲಿದ್ದ ವ್ಯಕ್ತಿ ಬದುಕಿದ್ದು, ಆ ದೃಶ್ಯವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಆದರೆ, ಆ ಕಾರ್ನಲ್ಲಿ ಎಷ್ಟು ಜನರು ಸಂಚಾರ ಮಾಡುತ್ತಿದ್ದರು ಎಂಬ ಬಗ್ಗೆ ಹಾಗೂ ಆ ನಂತರದ ಬೆಳವಣಿಗೆ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ.
ಈ ವಿಡಿಯೋಗೆ ಪ್ರತಿಕ್ರಿಯಿಸುತ್ತಿರುವ ನೆಟ್ಟಿಗರು ರಷ್ಯಾ ಸೈನಿಕರ ಬಗ್ಗೆ ಕಿಡಿ ಕಾರುತ್ತಿದ್ದಾರೆ. ಇದು ಯುದ್ಧ ನೀತಿಯಲ್ಲ. ಇದು ಉಗ್ರವರ್ತನೆ ಎಂಬೆಲ್ಲಾ ಕಮೆಂಟ್ಗಳನ್ನು ಮಾಡಿ ತಮ್ಮ ಅನಿಸಿಕೆ ಹೊರ ಹಾಕುತ್ತಿದ್ದಾರೆ. ಇನ್ನೊಂದೆಡೆ ಉಕ್ರೇನ್ನ ಸರ್ಕಾರಿ ಕಚೇರಿಯ ಮೇಲೆ ಬಾಂಬ್ ಇಟ್ಟು ಧ್ವಂಸ ಮಾಡಲಾಗಿದೆ. ಈ ವಿಡಿಯೋದಲ್ಲಿ ಕಟ್ಟಡ ದಗದಗನೇ ಉರಿಯುತ್ತಿರುವುದನ್ನು ಕಾಣಬಹುದು.