ಕರ್ನಾಟಕ

karnataka

ETV Bharat / international

Russian skydiver ​ವಿಮಾನ ಪತನ: 15 ಮಂದಿ ದುರ್ಮರಣ - ಸ್ಕೈಡೈವರ್‌ಗಳಿದ್ದ ರಷ್ಯಾದ ವಿಮಾನ ಪತನ

22 ಜನ ಸ್ಕೈಡೈವರ್‌ಗಳಿದ್ದ ರಷ್ಯಾದ ವಿಮಾನ ಟೇಕ್​ ಆಫ್​ ಆದ ಕೆಲಘಳಿಗೆಯಲ್ಲೇ ಅಪಘಾತಕ್ಕೀಡಾಗಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ.

Russian skydiver plane crashes killing 15
ರಷ್ಯಾದ ಸ್ಕೈಡೈವರ್​ ವಿಮಾನ ಪತನ: 15 ಮಂದಿ ದುರ್ಮರಣ

By

Published : Oct 10, 2021, 4:17 PM IST

ಮಾಸ್ಕೋ/ರಷ್ಯಾ: ಸ್ಕೈಡೈವರ್‌ಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನ ಮಧ್ಯ ರಷ್ಯಾದಲ್ಲಿ ಟೇಕಾಫ್ ಆದ ತಕ್ಷಣವೇ ಪತನಗೊಂಡಿದ್ದು, ವಿಮಾನದಲ್ಲಿದ್ದ 22 ಜನರ ಪೈಕಿ 15 ಮಂದಿ ಮೃತಪಟ್ಟಿದ್ದಾರೆ.

ಎಲ್ -410, ಜೆಕ್ ನಿರ್ಮಿತ ಟ್ವಿನ್​​ ಎಂಜಿನ್ ಟರ್ಬೊಪ್ರೂಪ್, ಮಾಸ್ಕೋದ ಪೂರ್ವಕ್ಕೆ ಸುಮಾರು 960 ಕಿಲೋಮೀಟರ್ (600 ಮೈಲಿ) ದೂರದಲ್ಲಿರುವ ಮೆನ್ಜೆಲಿನ್ಸ್ಕ್ ಪಟ್ಟಣದ ಬಳಿ ಪತನಗೊಂಡಿದೆ.

ಏಳು ಜನರನ್ನು ವಿಮಾನದ ಅವಶೇಷಗಳಿಂದ ಹೊರತೆಗೆಯಲಾಗಿದ್ದು, ಅವರಲ್ಲಿ ಒಬ್ಬರಿಗೆ ತೀವ್ರ ಗಾಯಗಳಾಗಿವೆ ಎಂದು ತುರ್ತು ಸಚಿವಾಲಯ ಹೇಳಿದೆ.

ವಿಮಾನ ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಶೋಧ ಕಾರ್ಯ ಮುಂದುವರಿದಿದೆ.

ABOUT THE AUTHOR

...view details