ಕರ್ನಾಟಕ

karnataka

ETV Bharat / international

ಬಾಹ್ಯಾಕಾಶದ ವಿಸ್ಮಯ ಸೆರೆಹಿಡಿದ ರಷ್ಯಾದ ಗಗನಯಾತ್ರಿ: ವಿಡಿಯೋ - ಬಾಹ್ಯಾಕಾಶದ ವಿಸ್ಮಯ ಸೆ

ಅಂಟಾರ್ಕ್ಟಿಕಾದ ಮೇಲೆ ಹಾದು ಹೋಗುವ ಅರೋರಾದ 60 ಸೆಕೆಂಡ್​ಗಳ ವಿಡಿಯೋ ಕ್ಲಿಪ್ ಅ​ನ್ನು ಶೇರ್​ ಮಾಡಿರುವ ರಷ್ಯಾದ ಗಗನಯಾತ್ರಿ ಇವಾನ್ ವ್ಯಾಗ್ನರ್, ಬಾಹ್ಯಾಕಾಶದ ವಿಸ್ಮಯದ ಕುರಿತು ಬರೆದುಕೊಂಡಿದ್ದಾರೆ.

ಬಾಹ್ಯಾಕಾಶದ ವಿಸ್ಮಯ : ವಿಡಿಯೋ
ಬಾಹ್ಯಾಕಾಶದ ವಿಸ್ಮಯ : ವಿಡಿಯೋ

By

Published : Aug 20, 2020, 3:50 PM IST

ಮಾಸ್ಕೋ:ರಷ್ಯಾದ ಗಗನಯಾತ್ರಿ ಇವಾನ್ ವ್ಯಾಗ್ನರ್ ಅವರು ಅಂಟಾರ್ಕ್ಟಿಕಾದ ಮೇಲೆ ಹಾದು ಹೋಗುವ ಅರೋರಾದ 60 ಸೆಕೆಂಡ್​ಗಳ ವಿಡಿಯೋ ಕ್ಲಿಪ್ ಅ​ನ್ನು ಶೇರ್​ ಮಾಡಿದ್ದಾರೆ.

ಕತ್ತಲ ಭಾಗದಿಂದ 5ಕ್ಕೂ ಹೆಚ್ಚು ವಸ್ತುಗಳು ಬೆಳಕಿನತ್ತ ಚಿಮ್ಮುತ್ತಿದ್ದು, ಅವುಗಳು ಕ್ಷಣಮಾತ್ರದಲ್ಲಿ ಬಾಹ್ಯಾಕಾಶದಿಂದ ಕಣ್ಮರೆಯಾಗುತ್ತವೆ.

ಬಾಹ್ಯಾಕಾಶದ ವಿಸ್ಮಯ : ವಿಡಿಯೋ

ಇನ್ನು ಈ ವಿಡಿಯೊದಲ್ಲಿ, "ಅರೋರಾ ಮಾತ್ರವಲ್ಲದೇ ನೀವು ಬೇರೆಯ ವಸ್ತುಗಳನ್ನು ಸಹ ಕಾಣಬಹುದಾಗಿದೆ" ಎಂದು ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಾಗ್ನರ್ ಟ್ವೀಟ್ ಮಾಡಿದ್ದಾರೆ.

ಸದ್ಯ ಈ ಬಗ್ಗೆ ರೋಸ್ಕೋಸ್ಮೋಸ್ ನಿರ್ವಹಣೆಯ ಗಮನಕ್ಕೆ ತರಲಾಗಿದ್ದು, ಇದರ ಬಗ್ಗೆ ಹೆಚ್ಚಿನ ವಿಶ್ಲೇಷಣೆಗಾಗಿ ವಸ್ತುಗಳನ್ನು ಟಿಎಸ್ಎನ್ಐ ಐಮಾಶ್ ಮತ್ತು ರಷ್ಯನ್ ಅಕಾಡೆಮಿ ಆಫ್ ಸೈನ್ಸ್​​​​ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿದೆ ಅವರು ತಿಳಿಸಿದ್ದಾರೆ.

ABOUT THE AUTHOR

...view details