ಮಾಸ್ಕೋ(ರಷ್ಯಾ): ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಬಹುತೇಕ ದೇಶಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಈ ಮಧ್ಯೆ ರಷ್ಯಾದ ಉದ್ಯಮಿಯೋರ್ವರು ಪುಟಿನ್ ಅವರನ್ನು ಹತ್ಯೆಗೈದು ಇಲ್ಲವೇ ಜೀವಂತ ಹಿಡಿದು ತರುವವರಿಗೆ 7.5 ಕೋಟಿ ರೂ(1 ಮಿಲಿಯನ್ ಡಾಲರ್) ಬಹುಮಾನ ನೀಡುವುದಾಗಿ ಫೇಸ್‌ಬುಕ್ ಮೂಲಕ ಘೋಷಣೆ ಮಾಡಿದ್ದಾರೆ.
ರಷ್ಯಾದ ಮಾಸ್ಕೋದಲ್ಲಿರುವ ಉದ್ಯಮಿ ಅಲೆಕ್ಸ್ ಕೊನನಿಖಲ್ ಈ ಬಗ್ಗೆ ಟ್ವೀಟ್ ಮಾಡಿದ್ದು, ವ್ಲಾಡಿಮಿರ್ ಪುಟಿನ್ ಅವರನ್ನು ಯುದ್ಧ ಅಪರಾಧಿ ಎಂದು ಘೋಷಿಸಿ ಹತ್ಯೆ ಅಥವಾ ಜೀವಂತ ಹಿಡಿದು ತರುವವರಿಗೆ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ರಷ್ಯಾ ಮಿಲಿಟರಿ ಪಡೆಯೇ ಈ ಕಾರ್ಯ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.