ಕರ್ನಾಟಕ

karnataka

ETV Bharat / international

ದೇಶ ರಕ್ಷಣೆ ಮೊದಲ ಆದ್ಯತೆ: ಉಕ್ರೇನ್​ ಸೇನೆಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ವಿಟಾಲಿ! - former boxing champion Vitali Klitschko

ಉಕ್ರೇನ್ ರಕ್ಷಣೆಗಾಗಿ ಅಲ್ಲಿನ ನಾಗರಿಕರು ಸ್ವಯಂ ಸೇವಕರಾಗಿ ಕೈಯಲ್ಲಿ ಗನ್​ ಹಿಡಿಯಲು ಮುಂದಾಗಿದ್ದು, ಇದೀಗ ಕೀವ್ ಮೇಯರ್​ ಹಾಗೂ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್​ ಹಾಗೂ ಆತನ ಸಹೋದರ ಮಿಲಿಟರಿ ಸೇರಿದ್ದಾರೆ.

former boxing champion Vitali Klitschko
former boxing champion Vitali Klitschko

By

Published : Feb 26, 2022, 4:57 PM IST

ಕೀವ್​(ಉಕ್ರೇನ್​):ರಷ್ಯಾ-ಉಕ್ರೇನ್​ ನಡುವಿನ ಸಂಘರ್ಷ ತಾರಕ್ಕೇರಿದ್ದು, ಈಗಾಗಲೇ ನೂರಾರು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಉಕ್ರೇನ್​ ರಕ್ಷಣೆಗಾಗಿ ಸ್ವಯಂಪ್ರೇರಿತರಾಗಿ ಸಾವಿರಾರು ಜನರು ಕೈಯಲ್ಲಿ ಗನ್​ ಹಿಡಿದು, ರಷ್ಯಾ ಮಿಲಿಟರಿ ದಾಳಿ ಎದುರಿಸುತ್ತಿದ್ದಾರೆ. ಇದೀಗ ಬಾಕ್ಸಿಂಗ್​​ ಮಾಜಿ ವಿಶ್ವ ಚಾಂಪಿಯನ್​​​ ವಿಟಾಲಿ ಕ್ಲಿಟ್ಸ್ಕೊ ಹಾಗೂ ಆತನ ಸಹೋದರ ಒಲಿಂಪಿಕ್​​ ಚಿನ್ನದ ಪದಕ ವಿಜೇತ ವ್ಲಾಡಿಮಿರ್ ಕ್ಲಿಟ್ಸ್ಕೊ ಮಿಲಿಟರಿ ಪಡೆ ಸೇರಿದ್ದಾರೆ.

ಉಕ್ರೇನ್​ ಸೇನೆಯಲ್ಲಿ ವಿಶ್ವ ಚಾಂಪಿಯನ್ ಬಾಕ್ಸರ್​, ಒಲಿಂಪಿಕ್​​ ಪದಕ ವಿಜೇತ!

ರಷ್ಯಾ ಮಿಲಿಟರಿ ದಾಳಿಯಿಂದ ತನ್ನ ದೇಶ ರಕ್ಷಣೆ ಮಾಡುವ ಉದ್ದೇಶದಿಂದ ಇಬ್ಬರು ಸಹೋದರರು ಇದೀಗ ಯುದ್ಧಭೂಮಿಗೆ ತೆರಳಿದ್ದು, ದೇಶದ ರಕ್ಷಣೆಗಾಗಿ ಮೆಷಿನ್​ ಗನ್​ ಲೋಡ್ ಮಾಡುತ್ತಿದ್ದಾರೆ. ಇದರ ಕೆಲವೊಂದು ಫೋಟೋ ಇದೀಗ ವೈರಲ್​​ ಆಗಿವೆ. ಉಕ್ರೇನ್ ಮಿಲಿಟರಿ ಪಡೆಯೊಂದಿಗೆ ಕೈ ಜೋಡಿಸಿರುವ ಇಬ್ಬರು ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ.

ದೇಶ ರಕ್ಷಣೆಯಲ್ಲಿ ಭಾಗಿಯಾದ ಬಾಕ್ಸಿಂಗ್​​ ಮಾಜಿ ವಿಶ್ವ ಚಾಂಪಿಯನ್

ಇದನ್ನೂ ಓದಿರಿ:ರಷ್ಯಾ - ಉಕ್ರೇನ್​ ಸಂಘರ್ಷ: ಉಕ್ರೇನ್​​ನಲ್ಲಿ 198 ನಾಗರಿಕರು ಸಾವು, ಸಾವಿರಕ್ಕೂ ಅಧಿಕ ಜನರಿಗೆ ಗಾಯ

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿಟಾಲಿ ಕ್ಲಿಟ್ಸ್ಕೊ ರಷ್ಯಾದ ಮಿಲಿಟರಿ ಆಕ್ರಮಣದಿಂದ ನನ್ನ ದೇಶವನ್ನ ರಕ್ಷಣೆ ಮಾಡಲು ನಾನು ಹೋರಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇವರೊಂದಿಗೆ ಒಲಿಂಪಿಕ್​ ಚಿನ್ನದ ವಿಜೇತ ವ್ಲಾಡಿಮಿರ್​ ಕ್ಲಿಟ್ಸ್ಕೊ ಸಹ ಇದ್ದು, ಶಸ್ತ್ರಾಸ್ತ್ರ ಜೋಡಣೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಕಳೆದ ಮೂರು ದಿನಗಳಿಂದ ಉಕ್ರೇನ್​-ರಷ್ಯಾ ನಡುವಿನ ಸಂಘರ್ಷ ಮುಂದುವರೆದಿದ್ದು, ಇಲ್ಲಿಯವರೆಗೆ ಉಭಯ ದೇಶದ ಅನೇಕ ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ABOUT THE AUTHOR

...view details