ಮಾಸ್ಕೋ(ರಷ್ಯಾ):ರಷ್ಯಾ ಜೊತೆ ಬೆಲಾರಸ್ನಲ್ಲಿ ಮಾತುಕತೆ ನಡೆಸಲು ಉಕ್ರೇನ್ ಹಿಂದೇಟು ಹಾಕಿದೆ ಎಂಬ ಮಾಹಿತಿ ಲಭ್ಯವಾಗಿರುವ ಬೆನ್ನಲ್ಲೇ ಮಿಲಿಟರಿ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳಿಸಲು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಆದೇಶ ನೀಡಿದ್ದಾರೆಂಬ ಮಾಹಿತಿ ಇದೀಗ ಹೊರಬಿದ್ದಿದೆ.
ಕಳೆದ ಮೂರು ದಿನಗಳ ಹಿಂದೆ ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದ್ದು, ಇದಕ್ಕೆ ಇಂದು ಮಧ್ಯಾಹ್ನ ಪೂರ್ಣ ವಿರಾಮ ನೀಡಿ, ಮಾತುಕತೆಗೆ ಬರುವಂತೆ ಉಕ್ರೇನ್ಗೆ ಸೂಚನೆ ನೀಡಲಾಗಿತ್ತು. ಆದರೆ, ಇದಕ್ಕೆ ಉಕ್ರೇನ್ ಹಿಂದೇಟು ಹಾಕುತ್ತಿದ್ದಂತೆ ಇದೀಗ ಎಲ್ಲ ದಿಕ್ಕುಗಳಿಂದಲೂ ಆಕ್ರಮಣ ಮತ್ತಷ್ಟು ತೀವ್ರಗೊಳಿಸಲು ರಷ್ಯಾ ಸೇನೆಗೆ ಸೂಚನೆ ನೀಡಲಾಗಿದೆ ಎಂದು ಮಾಸ್ಕೋದಲ್ಲಿರುವ ರಕ್ಷಣಾ ಇಲಾಖೆ ಮಾಹಿತಿ ಹಂಚಿಕೊಂಡಿದೆ.