ವಾಷಿಂಗ್ಟನ್ :ಅಮೆರಿಕ ಅಧಿಕಾರಿಗಳು ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸಲು, ಮತ್ತು ರಷ್ಯಾದೊಂದಿಗಿನ ಸಾಮಾನ್ಯ ವ್ಯಾಪಾರ ಸಂಬಂಧಗಳನ್ನು ನಿಲ್ಲಿಸುವ ಬಗ್ಗೆ ಸಂಸತ್ತಿನಲ್ಲಿ ಚಿಂತನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಕಂಡುಬಂದಿದೆ. ಈ ಬಗ್ಗೆ ಮಹತ್ವದ ಸಭೆ ಕರೆದಿದ್ದು, ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಮತ್ತೊಂದು ಕಡೆ, ವಿಶ್ವ ಸಂಸ್ಥೆಯು ಉಕ್ರೇನಿನಲ್ಲಿ ನಡೆಯುತ್ತಿರುವ ಮಕ್ಕಳ ಮತ್ತು ಯುವಜನರ ಮೇಲಿನ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದೆ. ಇವರ ರಕ್ಷಣೆಗಾಗಿ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಅಲ್ಲದೇ ವಿಶ್ವಸಂಸ್ಥೆಗೆ ಉಕ್ರೇನಿನಲ್ಲಿ ದಾಳಿಗೆ ಸಿಲುಕಿದ ಜನರಿಗೆ ಸಹಾಯ ಮಾಡುವಲ್ಲಿ ವಿಫಲವಾಗಿದೆ. ಆದರೆ ಜನರಿಗೆ ಸುರಕ್ಷತೆಯನ್ನು ಒದಗಿಸಲು ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಅಗತ್ಯ ಮಾನವೀಯ ನೆರವುಗಳನ್ನು ನೀಡುವಲ್ಲಿ ,ಜೊತೆಗೆ ರಷ್ಯಾದೊಂದಿಗೆ ಮಾತುಕತೆ ನಡೆಸಿದೆ ಎಂದು ಹೇಳಿದೆ.
ಐಸೋಟೋಪ್‌ಗಳ ಉತ್ಪಾದನಾ ಕೇಂದ್ರಕ್ಕೆ ಬೆಂಕಿ:ಅಲ್ಲದೇ ಉಕ್ರೇನಿನಲ್ಲಿರುವ ವೈದ್ಯಕೀಯ ಮತ್ತು ಕೈಗಾರಿಕಾ ಬಳಕೆಗಳಿಗಾಗಿ ರೇಡಿಯೊ ಐಸೋಟೋಪ್‌ಗಳನ್ನು ಉತ್ಪಾದಿಸುವ ಹೊಸ ಸಂಶೋಧನಾ ಕೇಂದ್ರವು ಖಾರ್ಕಿವ್‌ನಲ್ಲಿ ಶೆಲ್ ದಾಳಿಯಿಂದ ಹಾನಿಗೊಳಗಾಗಿದೆ ಎಂದು ತಿಳಿಸಿದೆ . ಯಾವುದೇ ವಿಕಿರಣ ಹಾನಿಗಳು ಉಂಟಾಗಿಲ್ಲ ಎಂದು ತಿಳಿದುಬಂದಿದೆ.