ಕೀವ್(ಉಕ್ರೇನ್):ರಷ್ಯಾ ಮತ್ತು ಉಕ್ರೇನ್ ಯುದ್ಧ 8ನೇ ದಿನಕ್ಕೆ ಕಾಲಿಟ್ಟಿದೆ. ದಾಳಿ ತೀವ್ರಗೊಳ್ಳುತ್ತಿದೆ. ಉಕ್ರೇನ್ರಾಜಧಾನಿ ಕೀವ್ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸುವ ಸೂಚನೆ ಸಿಕ್ಕಿದ ಬೆನ್ನಲ್ಲೇ ಅಲ್ಲಿನ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚನೆ ನೀಡಲಾಗಿದೆ.
'ಕೀವ್ನಲ್ಲಿ ವಾಯುದಾಳಿ ಎಚ್ಚರಿಕೆ. ನಿವಾಸಿಗಳು ಹತ್ತಿರದ ಸುರಕ್ಷಿತ ಆಶ್ರಯಗಳಿಗೆ ತೆರಳಬೇಕು' ಎಂದು ದಿ ಕೀವ್ ಇಂಡಿಪೆಂಡೆಂಟ್ ಟ್ವೀಟ್ ಮಾಡಿದೆ. ಕೀವ್ ಮಾತ್ರವಲ್ಲದೆ ಮೈಕೊಲೈವ್, ಎಲ್ವಿವ್, ಝೈಟೊಮಿರ್, ಇವಾನೊ-ಫ್ರಾಂಕಿವ್ಸ್ಕ್, ಚೆರ್ನಿಹಿವ್ ಮುಂತಾದ ನಗರಗಳಲ್ಲಿ ದಾಳಿ ನಡೆಯಬಹುದೆಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಕೀವ್, ಮೈಕೊಲೈವ್, ಎಲ್ವಿವ್, ಝೈಟೊಮಿರ್, ಇವಾನೊ-ಫ್ರಾಂಕಿವ್ಸ್ಕ್, ಚೆರ್ನಿಹಿವ್ ಮತ್ತು ಚೆರ್ನಿಹಿವ್ ಒಬ್ಲಾಸ್ಟ್, ವೊಲಿನ್ ಒಬ್ಲಾಸ್ಟ್, ಚೆರ್ಕಾಸಿ ಒಬ್ಲಾಸ್ಟ್, ಕಿರೊವೊಹ್ರಾಡ್ ಒಬ್ಲಾಸ್ಟ್, ಪೋಲ್ಟವಾ ಒಬ್ಲಾಸ್ಟ್, ಒಬ್ಲಾಝ್ಝೆಸ್ಟ್, ಕ್ಮೆಲ್ನಿಟ್ಸ್ಕಿ ನಗರಗಳಲ್ಲಿ ರಷ್ಯಾ ವೈಮಾನಿಕ ದಾಳಿ ನಡೆಸಬಹುದೆಂದು ಮುಂಚಿತವಾಗಿ ತಿಳಿಸಲಾಗಿದೆ.