ಎಲ್ವಿವ್(ರಷ್ಯಾ): ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭವಾದಾಗಿನಿಂದ ರಷ್ಯಾದ ಪಡೆಗಳು ತೀವ್ರವಾದ ದಾಳಿಯನ್ನು ನಡೆಸುತ್ತಿವೆ. ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ಸುತ್ತಮುತ್ತ ನಡೆದ ಸಂಘರ್ಷದಲ್ಲಿ ರಷ್ಯಾದ ಜನರಲ್ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಮಿಲಿಟರಿ ಗುಪ್ತಚರ ಸಂಸ್ಥೆ ತಿಳಿಸಿದೆ.
ಮೃತಪಟ್ಟ ಅಧಿಕಾರಿಯನ್ನು ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್(45) ಎಂದು ಗುರುತಿಸಲಾಗಿದೆ. ವಿಟಾಲಿ ಗೆರಾಸಿಮೊವ್ ಸಿರಿಯಾ ಮತ್ತು ಚೆಚೆನ್ಯಾದಲ್ಲಿ ನಡೆದ ಯುದ್ಧದಲ್ಲಿ ರಷ್ಯಾದ ಪಡೆಗಳೊಂದಿಗೆ ಹೋರಾಡಿದ್ದರು. 2014ರಲ್ಲಿ ಕ್ರಿಮಿಯಾವನ್ನು ವಶಪಡಿಸಿಕೊಂಡಾಗ ಆ ಯುದ್ಧದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.