ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾಶ್ಚಿಮಾತ್ಯ ದೇಶಗಳ ವಿರೋಧವನ್ನು ಲೆಕ್ಕಿಸದೇ ಉಕ್ರೇನ್‌ನ ಎರಡು ಒಡೆದ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್‌ಗಳಲ್ಲಿ, ತಮ್ಮ ಸರ್ಕಾರವು ಬೆಂಬಲಿಸುತ್ತಿರುವ ಒಂದು ದಶಕಕ್ಕೂ ಹೆಚ್ಚು ಹಳೆಯ ಪ್ರತ್ಯೇಕತಾವಾದಿ ಚಳವಳಿಯನ್ನು ಕಾನೂನುಬದ್ಧಗೊಳಿಸುವ ಯೋಜನೆಯನ್ನು ಮುಂದುವರೆಸಿದ್ದಾರೆ.
ರಷ್ಯಾದ ಭದ್ರತಾ ಮಂಡಳಿಯ ಸಭೆಯ ನಂತರ, ಪುಟಿನ್ ತಮ್ಮ ಭಾಷಣದಲ್ಲಿ ಮಿನ್ಸ್ಕ್ ಒಪ್ಪಂದದ ಪ್ರಕಾರ ಈ ಎರಡು ಸಂಘರ್ಷ ಪ್ರದೇಶಗಳು ಸ್ವತಂತ್ರ ರಾಷ್ಟ್ರಗಳೆಂದು ಹೇಳಿದ್ದಾರೆ. ಯುಎಸ್ ಮತ್ತು ಯುರೋಪಿಯನ್ ರಾಷ್ಟ್ರಗಳು ರಷ್ಯಾದ ಭದ್ರತಾ ಮಂಡಳಿಯ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ.
ಈ ಎರಡು ರಾಷ್ಟ್ರಗಳು ಇದನ್ನು ಉಕ್ರೇನ್‌ನ ಸಾರ್ವಭೌಮತ್ವದ ಮೇಲಿನ ದಾಳಿ ಎಂದು ಕರೆದಿವೆ. ಈ ನಿರ್ಧಾರವು ಏಕಪಕ್ಷೀಯವಾಗಿದ್ದು, ಮಿನ್ಸ್ಕ್ 2 ಒಪ್ಪಂದದ ಉಲ್ಲಂಘನೆಯಾಗಿದೆ. ಹಿಂದಿನ ಚಾರ್ಟರ್ ಮಿನ್ಸ್ಕ್ 1 ಒಪ್ಪಂದವನ್ನು ಸೆಪ್ಟೆಂಬರ್ 2014 ರಲ್ಲಿ ಕಾರ್ಯಗತಗೊಳಿಸಲಾಗಿದೆ.