ಕೀವ್( ಉಕ್ರೇನ್):ದೀರ್ಘಕಾಲದಿಂದ ಬಳಕೆಯಾಗದ ಚೆರ್ನೋಬಿಲ್ ಪರಮಾಣು ಸ್ಥಾವರವನ್ನು ವಶಪಡಿಸಿಕೊಳ್ಳಲು ರಷ್ಯಾ ಪಡೆಗಳು ಪ್ರಯತ್ನಿಸುತ್ತಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ. ಈ ಸಂಬಂಧ ಅವರು ಟ್ವೀಟ್ ಮಾಡಿ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ರಷ್ಯಾ ಪಡೆಗಳು ಚೋರ್ನೋಬಿಲ್ ಪರಮಾಣು ಸ್ಥಾವರವನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡುತ್ತಿವೆ. ರಷ್ಯಾ ಪಡೆಗಳ ಆಕ್ರಮಣವನ್ನು ನಮ್ಮ ಪಡೆಗಳು ಸಮರ್ಥವಾಗಿ ತಡೆಯುತ್ತಿದ್ದು, 1986 ರ ದುರಂತವನ್ನು ಪುನರಾವರ್ತಿಸದಂತೆ ತಮ್ಮ ಪ್ರಾಣ ಒತ್ತೆ ಇಟ್ಟು ಕಾಪಾಡುತ್ತಿವೆ. ಇದು ಇಡೀ ಯುರೋಪ್ ವಿರುದ್ಧದ ಯುದ್ಧದ ಘೋಷಣೆಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಟ್ವೀಟ್ ನಲ್ಲಿ ಹೇಳಿದ್ದಾರೆ.