ಮಾಸ್ಕೋ: ರಷ್ಯಾದ ಸ್ಪುಟ್ನಿಕ್ ವಿ ಕೊರೊನಾ ವ್ಯಾಕ್ಸಿನ್‌ನ 100 ಮಿಲಿಯನ್ ಡೋಸ್‌ಗಳನ್ನು ಭಾರತದ ಡಾ.ರೆಡ್ಡೀಸ್ ಪ್ರಯೋಗಾಲಯಕ್ಕೆ ಪೂರೈಸುವುದಾಗಿ ರಷ್ಯಾದ ನೇರ ಹೂಡಿಕೆ ನಿಧಿ(ಆರ್‌ಡಿಐಎಫ್) ಸ್ಪಷ್ಟಪಡಿಸಿದೆ.
ಆರ್‌ಡಿಎಫ್‌ಐ, ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಲಿಮಿಟೆಡ್ ಸಂಸ್ಥೆಗಳು ಸ್ಪಿಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ವೈದ್ಯಕೀಯ ಪ್ರಯೋಗ ಮತ್ತು ಹಂಚಿಕೆ ಕುರಿತು ಒಪ್ಪಂದ ಮಾಡಿಕೊಂಡಿವೆ. ಸರ್ಕಾರದಿಂದ ಅನುಮತಿ ದೊರೆತ ನಂತರ ಆರ್‌ಡಿಐಎಫ್ ಡಾ.ರೆಡ್ಡೀಸ್‌ಗೆ 100 ಮಿಲಿಯನ್ ಡೋಸ್‌ಗಳನ್ನು ಪೂರೈಕೆ ಮಾಡುವುದಾಗಿ ಆರ್‌ಡಿಐಎಫ್ ಹೇಳಿಕೆ ಬಿಡುಗಡೆ ಮಾಡಿದೆ. 2020ರ ವರ್ಷಾಂತ್ಯದ ವೇಳೆಗೆ ಭಾರತಕ್ಕೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದೆ.