ಮಾಸ್ಕೋ (ರಷ್ಯಾ):ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿರುವ ಭಾರತಕ್ಕೆ 20 ಆಕ್ಸಿಜನ್ ಉತ್ಪಾದಕಗಳು, 75 ವೆಂಟಿಲೇಟರ್‌ಗಳು ಮತ್ತು 2 ಲಕ್ಷ ಪ್ಯಾಕೆಟ್ ಔಷಧಿಗಳು ಸೇರಿದಂತೆ 22 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಕಳಿಸಿರುವುದಾಗಿ ರಷ್ಯಾ ತಿಳಿಸಿದೆ.
ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ಎರಡು ವಿಮಾನಗಳು ಈಗಾಗಲೇ ಭಾರತದ ಕಡೆ ಹೊರಟಿವೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಹೇಳಿದೆ.
'ಕೋವಿಡ್ ವಿರುದ್ಧ ಹೋರಾಡಲು ಮತ್ತು ಜೀವಗಳನ್ನು ಉಳಿಸಲು ರಷ್ಯಾ ಭಾರತಕ್ಕೆ ಆಮ್ಲಜನಕ ಉತ್ಪಾದಕಗಳು, ವೆಂಟಿಲೇಟರ್‌ಗಳು ಮತ್ತು 22 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದೆ. ಎರಡು ವಿಮಾನಗಳು ಈಗಾಗಲೇ ಭಾರತದತ್ತ ತೆರಳಿದೆ' ಎಂದು ಸಚಿವಾಲಯ ಟ್ವೀಟ್ ಮಾಡಿದೆ.