ಕರ್ನಾಟಕ

karnataka

ETV Bharat / international

ಸ್ಪುಟ್ನಿಕ್​ ವಿ ಕೋವಿಡ್​-19 ಲಸಿಕೆ ಶೇ.95ರಷ್ಟು ಪರಿಣಾಮಕಾರಿ : ರಷ್ಯಾ - Sputnik V vaccine over 95 pc effective

ನವೆಂಬರ್ 24ರಂದು 22,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ಮೊದಲ ಡೋಸ್ ಮತ್ತು 19,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ಲಸಿಕೆಯ ಮೊದಲ ಮತ್ತು ಎರಡನೆಯ ಡೋಸ್ ಅನ್ನು ರಷ್ಯಾದ 29 ವೈದ್ಯಕೀಯ ಕೇಂದ್ರಗಳಲ್ಲಿ ನಡೆಯುತ್ತಿರುವ ಕ್ಲಿನಿಕಲ್ ಪ್ರಯೋಗಗಳಲ್ಲಿ ಲಸಿಕೆ ನೀಡಲಾಗಿದೆ..

ಸ್ಪುಟ್ನಿಕ್​ ವಿ ಕೋವಿಡ್​-19
ಸ್ಪುಟ್ನಿಕ್​ ವಿ ಕೋವಿಡ್​-19

By

Published : Nov 24, 2020, 7:16 PM IST

ನವದೆಹಲಿ :ಸ್ಪುಟ್ನಿಕ್​ ವಿ ಕೋವಿಡ್​-19 ಲಸಿಕೆ ಶೇ.95ರಷ್ಟು ಪರಿಣಾಮಕಾರಿ ಎಂದು ರಷ್ಯಾ ಹೇಳಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಡೋಸ್​ ಶಾಟ್​ನ ಬೆಲೆ 740 ರೂ.ಗಿಂತ ಕಡಿಮೆ ಇರಲಿದೆ ಎಂದಿದೆ.

ಸ್ವಯಂಸೇವಕರು ಮೊದಲ ಡೋಸ್ ಪಡೆದ 42 ದಿನಗಳ ನಂತರ ಮತ್ತು ಎರಡನೇ ಡೋಸ್ ಪಡೆದ 21 ದಿನಗಳ ನಂತರದ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಲಸಿಕೆಯೂ ಶೇ. 95ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಗೇಮ್ಲ್ಯ ರಾಷ್ಟ್ರೀಯ ಕೇಂದ್ರ ಮತ್ತು ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.

'ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಸ್ಪುಟ್ನಿಕ್ ವಿ ಲಸಿಕೆಯ ಒಂದು ಡೋಸ್ ಬೆಲೆ ಯುಎಸ್ಡಿ 10(740 ರೂ.) ಕ್ಕಿಂತ ಕಡಿಮೆ ಇರುತ್ತದೆ. ಇದು ಡಬಲ್ ಡೋಸ್ ಲಸಿಕೆ' ಎಂದು ಹೇಳಿಕೆ ತಿಳಿಸಿದೆ. ಮೊದಲ ಡೋಸ್‌ ನೀಡಿದ 28 ದಿನಗಳ ನಂತರ ಮತ್ತು ಎರಡನೇ ಡೋಸ್​​ನ ಏಳು ದಿನಗಳ ಮೇಲೆ ಪಡೆದ ಡೇಟಾದ ವಿಶ್ಲೇಷಣೆಯ ಆಧಾರದ ಮೇಲೆ ಸ್ಪುಟ್ನಿಕ್ ವಿ ಲಸಿಕೆಯ ಪರಿಣಾಮವೂ ಶೇ.91.4 ಇದೆ.

ನವೆಂಬರ್ 24ರಂದು 22,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ಮೊದಲ ಡೋಸ್ ಮತ್ತು 19,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ಲಸಿಕೆಯ ಮೊದಲ ಮತ್ತು ಎರಡನೆಯ ಡೋಸ್ ಅನ್ನು ರಷ್ಯಾದ 29 ವೈದ್ಯಕೀಯ ಕೇಂದ್ರಗಳಲ್ಲಿ ನಡೆಯುತ್ತಿರುವ ಕ್ಲಿನಿಕಲ್ ಪ್ರಯೋಗಗಳಲ್ಲಿ ಲಸಿಕೆ ನೀಡಲಾಗಿದೆ ಎಂದು ಅದು ಹೇಳಿದೆ.

"ಪ್ರಸ್ತುತ ಹಂತ III ಪ್ರಾಯೋಗಿಕ ಪ್ರಯೋಗಗಳು ಅನುಮೋದಿಸಲಾಗಿದೆ. ಭಾರತದಲ್ಲಿ ಬೆಲಾರಸ್,ಯುಎಇ, ವೆನೆಜುವೆಲಾ ಮತ್ತು ಇತರ ದೇಶಗಳ ಜೊತೆಗೆ ಫೇಸ್ II& IIIರಲ್ಲಿ ಮುಂದುವರಿಯುತ್ತಿವೆ," ಎಂದಿದೆ.

ABOUT THE AUTHOR

...view details