ಕರ್ನಾಟಕ

karnataka

ETV Bharat / international

ಘನಿ ದೇಶ ತೊರೆಯುವ ಮುನ್ನ ಕಾರು-ಹೆಲಿಕಾಪ್ಟರ್​ನಲ್ಲಿ ಹಣ ತುಂಬಿಕೊಂಡು ಹೋಗಿದ್ದಾರೆ: ರಷ್ಯಾ

ಅಫ್ಘಾನ್ ಅಧ್ಯಕ್ಷರಾಗಿದ್ದ ಅಶ್ರಫ್​ ಘನಿ ಅಫ್ಘಾನಿ ಸ್ಥಾನ ತೊರೆಯುವುದಕ್ಕೂ ಮುನ್ನ ಕಾರು ಮತ್ತು ಹೆಲಿಕಾಪ್ಟರ್​ಗಳಲ್ಲಿ ಹಣ ತುಂಬಿಕೊಂಡು ಹೋಗಿದ್ದಾರೆಂದು ರಷ್ಯಾ ಆರೋಪಿಸಿದೆ.

ಘನಿ
ಘನಿ

By

Published : Aug 16, 2021, 5:48 PM IST

Updated : Aug 16, 2021, 5:56 PM IST

ಮಾಸ್ಕೋ (ರಷ್ಯಾ): ಅಫ್ಘಾನ್ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶ ತೊರೆಯುವ ಮುನ್ನ ನಾಲ್ಕು ಕಾರು ಮತ್ತು ಹೆಲಿಕಾಪ್ಟರ್​ಗೆ ಹಣ ತುಂಬಿಕೊಂಡು ಹೋಗಿದ್ದಾರೆ ಎಂದು ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿ ಆರೋಪಿಸಿದೆ. ಘನಿ ಸದ್ಯ ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ತಾಲಿಬಾನ್ ಉಗ್ರ​ ಪಡೆ ಕಾಬೂಲ್​ ಪ್ರವೇಶಿಸಿದ್ದರಿಂದ ಅಧ್ಯಕ್ಷ ಘನಿ ಶರಣಾಗಿ ದೇಶವನ್ನು ತೊರೆದರು. ಅವರು ಅಫ್ಘಾನ್ ತೊರೆಯುವುದಕ್ಕೂ ಮುನ್ನ ರಕ್ತಪಾತ ತಪ್ಪಿಸಲು ನಾನು ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ ಎಂದು ಹೇಳಿದ್ದರು.

ಕಾಬೂಲ್‌ನಲ್ಲಿ ರಷ್ಯಾವು ರಾಜತಾಂತ್ರಿಕ ಅಸ್ತಿತ್ವವನ್ನು ಉಳಿಸಿಕೊಳ್ಳುವುದಾಗಿ ಹೇಳಿದೆ. ತಾಲಿಬಾನಿಗಳನ್ನು ದೇಶದ ಆಡಳಿತಗಾರರನ್ನಾಗಿ ಗುರುತಿಸಲು ಯಾವುದೇ ಆತುರವಿಲ್ಲ. ಅವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ ಹೇಳಿದ್ದು, ಅವರೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುವ ಭರವಸೆ ಹೊಂದಿದೆ.

ಇದನ್ನೂ ಓದಿ: ಅಫ್ಘಾನ್‌ನಲ್ಲಿನ ಅನಿಶ್ಚಿತತೆ: ಭಾರತ ವ್ಯಾಪಾರದ ಮೇಲೆ ಪರಿಣಾಮ

ತಾಲಿಬಾನ್​ ಕಾಬೂಲ್ ಆಕ್ರಮಿಸಿಕೊಳ್ಳುತ್ತಿದ್ದಂತೆ ಘನಿ, ಸರ್ಕಾರ ತೊರೆದು ಪಲಾಯನ ಮಾಡಿದ ರೀತಿ ಸರಿಯಿಲ್ಲ. ನಾಲ್ಕು ಕಾರುಗಳು ಮತ್ತು ಹೆಲಿಕಾಪ್ಟರ್​ಗೆ ಹಣ ತುಂಬಿಸಿಕೊಂಡು ಹೋಗಿದ್ದಾರೆ. ಈ ವೇಳೆ ರಸ್ತೆಯಲ್ಲೆಲ್ಲಾ ಹಣ ಬಿದ್ದಿದೆ ಎಂದು ರಷ್ಯಾದ ರಾಯಭಾರ ಕಚೇರಿಯ ವಕ್ತಾರರಾದ ಇಶ್ಚೆಂಕೊ ದೂರಿದ್ದಾರೆ.

Last Updated : Aug 16, 2021, 5:56 PM IST

ABOUT THE AUTHOR

...view details