ಮಾಸ್ಕೋ(ರಷ್ಯಾ):ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ನಿರ್ಧಾರಕ್ಕೆ ಅಮೆರಿಕ, ಬ್ರಿಟನ್ ಸೇರಿದಂತೆ ಜಗತ್ತಿನ ಅನೇಕ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ವಿಷಯದಲ್ಲಿ ಭಾರತ ಮಾತ್ರ ತಟಸ್ಥ ನಿಲುವು ತೆಗೆದುಕೊಂಡಿದ್ದು, ಇದಕ್ಕೆ ರಷ್ಯಾ ಮೆಚ್ಚುಗೆ ವ್ಯಕ್ತಪಡಿಸಿದೆ.
ಅನೇಕ ಸಂಕಷ್ಟ, ಸಂದಿಗ್ಧ ಸಂದರ್ಭಗಳಲ್ಲಿ ಭಾರತದ ಪಾಲಿಗೆ ರಷ್ಯಾ ಆಪತ್ಬಾಂಧವನಾಗಿ ಕೆಲಸ ಮಾಡಿದೆ. ಇದೇ ಕಾರಣಕ್ಕಾಗಿ ಉಕ್ರೇನ್ ವಿರುದ್ಧದ ರಷ್ಯಾ ಹೋರಾಟದಲ್ಲಿ ಭಾರತ ಯಾವುದೇ ನಿರ್ಧಾರ ಕೈಗೊಳ್ಳದೇ ತಟಸ್ಥ ನಿಲುವು ಅನುಸರಿಸಿದೆ.
ರಷ್ಯಾ ನಿರ್ಧಾರಕ್ಕೆ ತೀವ್ರ ಟೀಕೆ ವ್ಯಕ್ತಪಡಿಸಿರುವ ಅನೇಕ ದೇಶಗಳು ಆರ್ಥಿಕ ಸೇರಿದಂತೆ ಅನೇಕ ರೀತಿಯ ನಿರ್ಬಂಧಗಳನ್ನು ಈಗಾಗಲೇ ವಿಧಿಸಿವೆ. ಇದರಿಂದ ಕೋಪಗೊಂಡಿರುವ ರಷ್ಯಾ ಇದೀಗ ತನ್ನ ಬಾಹ್ಯಾಕಾಶ ರಾಕೆಟ್ ಮೇಲಿದ್ದ ಅಮೆರಿಕ, ಬ್ರಿಟನ್, ಜಪಾನ್ ಹಾಗು ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳ ಧ್ವಜವನ್ನು ಅಳಿಸಿ ಹಾಕಿದೆ. ಆದ್ರೆ, ಇದೇ ವೇಳೆ ತ್ರಿವರ್ಣಧ್ವಜವನ್ನು ಹಾಗೆಯೇ ಉಳಿಸಿಕೊಂಡಿತು. ಈ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.
ಇದನ್ನೂ ಓದಿ:'ಭಾರತೀಯರು ಉಳಿದುಕೊಳ್ಳಲು ಜಾಗ, ಆಹಾರ ಕೊಟ್ಟಿದ್ದು ನಾನು ನೀವಲ್ಲ': ರೊಮೇನಿಯಾ ಮೇಯರ್ ಗರಂ