ಕರ್ನಾಟಕ

karnataka

ETV Bharat / international

ಉಕ್ರೇನ್​ ನಡುವಿನ ಯುದ್ಧದಲ್ಲಿ 450 ರಷ್ಯನ್ ಸೈನಿಕರು ಮೃತ : ಬ್ರಿಟನ್ ಮಾಹಿತಿ

ರಷ್ಯಾದ ಎರಡು ಕ್ಷಿಪಣಿ ಮತ್ತು ಒಂದು ಯುದ್ಧ ವಿಮಾನವನ್ನು ಉಕ್ರೆನ್ ಹೊಡೆದುರುಳಿಸಿದೆ ಎಂದು ಉಕ್ರೇನ್ ಅಧ್ಯಕ್ಷರಿಗೆ ಅವರ ಸಲಹೆಗಾರರು ಹೇಳಿದ್ದಾರೆಂದು ರಾಯಿಟರ್ಸ್ ವರದಿ ಮಾಡಿದೆ..

Russia lost over 450 soldiers in Ukraine attack: UK
ಉಕ್ರೇನ್​ ನಡುವಿನ ಯುದ್ಧದಲ್ಲಿ 450 ರಷ್ಯನ್ ಸೈನಿಕರು ಮೃತ: ಬ್ರಿಟನ್ ಮಾಹಿತಿ

By

Published : Feb 25, 2022, 2:38 PM IST

ಕೀವ್, ಉಕ್ರೇನ್ :ರಷ್ಯಾ ಪಡೆಗಳು ಮತ್ತು ಉಕ್ರೇನ್​ ನಡುವೆ ಸಂಘರ್ಷ ತೀವ್ರಗೊಂಡಿದೆ. ಸುಮಾರು 450ಕ್ಕೂ ಹೆಚ್ಚು ರಷ್ಯಾ ಸೈನಿಕರು ಯುದ್ಧದಲ್ಲಿ ಮೃತಪಟ್ಟಿದ್ದಾರೆ ಎಂದು ಯುನೈಟೆಡ್ ಕಿಂಗ್​ಡಮ್ ಮಾಹಿತಿ ನೀಡಿದೆ. ಈ ಮೂಲಕ ಸಾವು-ನೋವಿನ ಪ್ರಮಾಣದಲ್ಲಿ ಹೆಚ್ಚಾಗಿರುವುದು ಕಂಡು ಬಂದಿದೆ.

ಬ್ರಿಟನ್ ಈಗಾಗಲೇ ರಷ್ಯಾ ವಿರುದ್ಧ ಮಿತ್ರರಾಷ್ಟ್ರ ಅಮೆರಿಕ ಸಲಹೆಯಂತೆ ನಿರ್ಬಂಧವನ್ನು ಹೇರಿದೆ. ಈ ಹಿನ್ನೆಲೆಯಲ್ಲಿ ತಮ್ಮ ದೇಶದೊಳಗೆ ಬರುವ ಎಲ್ಲಾ ಬ್ರಿಟಿಷ್ ವಿಮಾನಗಳಿಗೆ ರಷ್ಯಾ ನಿರ್ಬಂಧ ವಿಧಿಸಿದೆ.

ಇದರ ಜೊತೆಗೆ 18 ಉಕ್ರೇನಿಯನ್ ಟ್ಯಾಂಕ್‌ಗಳು ನಾಶವಾಗಿವೆ ಎಂದು ರಷ್ಯಾ ಹೇಳಿಕೊಳ್ಳುತ್ತಿದ್ದು, ರಷ್ಯಾದ ಇಬ್ಬರು ಪ್ಯಾರಾಟ್ರೂಪರ್‌ಗಳನ್ನು ಬಂಧಿಸಿದ್ದೇವೆ ಎಂದು ಉಕ್ರೇನ್ ಮಾಹಿತಿ ನೀಡಿದೆ.

ಅಷ್ಟು ಮಾತ್ರವಲ್ಲದೆ ರಷ್ಯಾದ ಎರಡು ಕ್ಷಿಪಣಿ ಮತ್ತು ಒಂದು ಯುದ್ಧ ವಿಮಾನವನ್ನು ಉಕ್ರೆನ್ ಹೊಡೆದುರುಳಿಸಿದೆ ಎಂದು ಉಕ್ರೇನ್ ಅಧ್ಯಕ್ಷರಿಗೆ ಅವರ ಸಲಹೆಗಾರರು ಹೇಳಿದ್ದಾರೆಂದು ರಾಯಿಟರ್ಸ್ ವರದಿ ಮಾಡಿದೆ.

ಇದನ್ನೂ ಓದಿ:ಪುಟಿನ್ ವಿರುದ್ಧ ರಷ್ಯಾದಲ್ಲಿ ಭಾರಿ ಪ್ರತಿಭಟನೆ : ಹಿಟ್ಲರ್-ಪುಟಿನ್ ಮಿಮ್​​ ಹಂಚಿಕೊಂಡ ಉಕ್ರೇನ್

ABOUT THE AUTHOR

...view details