ಮಾಸ್ಕೋ:ಕಪ್ಪು ಸಮುದ್ರದಲ್ಲಿ ದೇಶದ ಜಲ ಪ್ರದೇಶದ ಗಡಿಯನ್ನು ದಾಟಿ ಬಂದಿದ್ದ ಬ್ರಿಟನ್‌ನ ಬ್ರಿಟಿಷ್ ರಾಯಲ್ ನೇವಿ ಹಡಗನ್ನು ತಡೆಯಲು ರಷ್ಯಾ ಎಚ್ಚರಿಕೆ ನೀಡುವ ಗುಂಡುಗಳನ್ನು ಹಾರಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಕ್ರಿಮಿಯಾದ ಕೇಪ್ ಫಿಯೊಲೆಂಟ್ ಕರಾವಳಿಯಲ್ಲಿ ಈ ಘಟನೆ ನಡೆದಿದೆ.
ಬ್ರಿಟನ್‌ನ ಎಚ್‌ಎಂಎಸ್ ಡಿಫೆಂಡರ್ ಯುದ್ಧ ನೌಕೆ ರಷ್ಯಾ ಗಡಿಗೆ ನುಗ್ಗಿದ್ದು, ಅಲ್ಲಿನ ನಿಯಮಗಳನ್ನು ಉಲ್ಲಂಘಿಸಿದರೆ ಶಸ್ತ್ರಾಸ್ತ್ರಗಳನ್ನು ಬಳಸಬೇಕಾಗುತ್ತದೆ ಎಂಬ ಸೂಚನೆ ನೀಡಿದೆ. ಆದರೆ ಬ್ರಿಟಿಷ್ ಯುದ್ಧನೌಕೆ ಈ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಸಚಿವಾಲಯ ತಿಳಿಸಿದೆ. 2014ರಲ್ಲಿ ಉಕ್ರೇನ್‌ನಿಂದ ಈ ಪ್ರದೇಶವನ್ನು ರಷ್ಯಾ ವಶಪಡಿಸಿಕೊಂಡಿತ್ತು.