ಕೀವ್(ಉಕ್ರೇನ್): ಉಕ್ರೇನ್ ಮೇಲಿನ ರಷ್ಯಾ ದಾಳಿ ಮುಂದುವರೆದಿದೆ. ರಷ್ಯಾ ದಾಳಿಯಲ್ಲಿ ಇದುವರೆಗೂ 14 ಮಕ್ಕಳು ಸೇರಿದಂತೆ 352 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ. ಈ ಮಧ್ಯೆ ಉಭಯ ರಾಷ್ಟ್ರಗಳ ನಡುವೆ ಬೆಲಾರಸ್ನಲ್ಲಿ ಮಾತುಕತೆ ನಡೆಯುತ್ತಿದೆ. ಮೊದಲ ಹಂತದ ಮಾತುಕತೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲಾಗದಿದ್ದರೂ ಹಲವು ಅಂಶಗಳ ಬಗ್ಗೆ ಚರ್ಚೆಗೆ ಒಪ್ಪಿಕೊಳ್ಳಲಾಗಿದೆ.
ರಷ್ಯಾ ದಾಳಿಗೆ 14 ಮಕ್ಕಳು ಸೇರಿ 352 ಮಂದಿ ಬಲಿ: ನಾಗರಿಕ ಪ್ರದೇಶಗಳ ಮೇಲೆ ಬಾಂಬ್ ದಾಳಿ - 50 ಲಕ್ಷ ಜನ ಉಕ್ರೇನ್‌ನಿಂದ ಪಲಾಯನ
ರಷ್ಯಾದ ಫಿರಂಗಿದಳವು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ಮೇಲೆ ದಾಳಿ ನಡೆಸಿದೆ. ಖಾರ್ಕಿವ್‌ನಲ್ಲಿ ನಡೆಯುತ್ತಿರುವ ಶೆಲ್ ದಾಳಿಯಲ್ಲಿ ಕನಿಷ್ಠ 11 ನಾಗರಿಕರು ಸಾವನ್ನಪ್ಪಿದ್ದಾರೆ.
Russia Bombs Civilian Areas, Ukraine Says 350 Killed In Invasion: 10 Facts
ಉಕ್ರೇನ್- ರಷ್ಯಾ ನಡುವಣ ಯುದ್ಧದ ಪ್ರಮುಖಾಂಶಗಳನ್ನು ನೋಡುವುದಾದರೆ,
- ರಷ್ಯಾದ ಫಿರಂಗಿದಳವು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ಮೇಲೆ ದಾಳಿ ನಡೆಸಿದೆ. ಖಾರ್ಕಿವ್‌ನಲ್ಲಿ ನಡೆಯುತ್ತಿರುವ ಶೆಲ್ ದಾಳಿಯಲ್ಲಿ ಕನಿಷ್ಠ 11 ನಾಗರಿಕರು ಸಾವನ್ನಪ್ಪಿದ್ದಾರೆ.
- ಕಳೆದ ಗುರುವಾರದಿಂದ ಶುರುವಾದ ರಷ್ಯಾ ದಾಳಿಯಲ್ಲಿ ಇದುವರೆಗೂ 14 ಮಕ್ಕಳು ಸೇರಿದಂತೆ 352 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಕೀವ್ ಹೇಳಿದೆ. ಇದೇ ವೇಳೆ ರಷ್ಯಾಕ್ಕೆ ಪ್ರತಿಯಾಗಿ ಉಕ್ರೇನ್ ನಡೆಸಿದ ಪ್ರತಿದಾಳಿಯಲ್ಲಿ ಭಾರಿ ನಷ್ಟವಾಗಿದೆ ಎಂಬುದನ್ನು ಮಾಸ್ಕೋ ಒಪ್ಪಿಕೊಂಡಿದೆ.
- ರಷ್ಯಾದ ಆಕ್ರಮಣದ ಪ್ರಾರಂಭದಿಂದಲೂ ಇಲ್ಲಿವರೆಗೂ ಸುಮಾರು 50 ಲಕ್ಷ ಜನ ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್‌ನ ನಿರಾಶ್ರಿತರ ವಿಭಾಗ ಹೇಳಿದೆ.
- ಉಕ್ರೇನ್ ಮತ್ತು ರಷ್ಯಾ ನಡುವಣ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಾಣದೇ ಇರುವುದರಿಂದ ಅಂತಾರಾಷ್ಟ್ರೀಯ ಸಮುದಾಯದ ಸಿಟ್ಟನ್ನು ರಷ್ಯಾ ಎದುರಿಸಬೇಕಾಗಿದೆ.
- ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಯುತ್ತಿದೆ. ರಷ್ಯಾವನ್ನು ಅಂತಾರಾಷ್ಟ್ರೀಯ ಸಮುದಾಯದಿಂದ ಪ್ರತ್ಯೇಕಿಸಲು ಮತ ಚಲಾವಣೆಗೆ ಎಲ್ಲ ಸಿದ್ಧತೆ ನಡೆದಿದೆ.
- ಒಂದು ವಾರದಲ್ಲಿ ಎರಡನೇ ಬಾರಿಗೆ, ರಷ್ಯಾ ಉಕ್ರೇನ್ ಆಕ್ರಮಣಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ದೂರವಿದೆ. ಈ ನಡುವೆ ಬೆಲಾರಸ್ ಗಡಿಯಲ್ಲಿ ಮಾತುಕತೆ ನಡೆಸಲು ಮಾಸ್ಕೋ ಮತ್ತು ಕೀವ್ ನಿರ್ಧಾರವನ್ನು ನವದೆಹಲಿ ಸ್ವಾಗತಿಸಿದೆ.
- ಈ ನಡುವೆ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ಗೆ ಬೆಂಬಲ ಸೂಚಿಸಿವೆ. ಫಿನ್ಲ್ಯಾಂಡ್ 2500 ರೈಫಲ್ಗಳನ್ನು ಮತ್ತು 1500 ಟ್ಯಾಂಕರ್ ಪ್ರತಿರೋಧಕ ಆಯುಧಗಳನ್ನು ರವಾನಿಸಲು ಒಪ್ಪಿಕೊಂಡಿದೆ.
ಇದನ್ನೂ ಓದಿ: ಗ್ರಾಹಕರಿಗೆ ಮತ್ತೆ ಶಾಕ್.. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 105 ರೂ. ಏರಿಕೆ!