ಮಾಸ್ಕೋ:ವಿಶ್ವಸಂಸ್ಥೆಯಿಂದ ರಷ್ಯಾದ ರಾಜತಾಂತ್ರಿಕರನ್ನು ವಾಷಿಂಗ್ಟನ್ ಇತ್ತೀಚೆಗಷ್ಟೇ ಹೊರಹಾಕಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಷ್ಯಾ, ಅಮೆರಿಕ ರಾಯಭಾರಿಯನ್ನು ಹೊರಹಾಕಿದೆ. ಈ ಸಂಬಂಧ ಹೇಳಿಕೆ ನೀಡಿರುವ ರಷ್ಯಾ, ರಷ್ಯಾದ ವಿದೇಶಾಂಗ ಇಲಾಖೆ ಬುಧವಾರ ಮಾಸ್ಕೋದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಹಿರಿಯ ರಾಜತಾಂತ್ರಿಕರನ್ನು ಕರೆಸಿಕೊಂಡು ಈ ಆದೇಶವನ್ನು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ರಾಯಭಾರ ಕಚೇರಿ ಹಿರಿಯ ಅಧಿಕಾರಿಯನ್ನು ಕರೆಯಿಸಿ ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳ ಪಟ್ಟಿ ಪಡೆದು, "ಪರ್ಸನಾ ನಾನ್ ಗ್ರಾಟಾ" ಎಂದು ಘೋಷಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ರಷ್ಯಾ ವಿರುದ್ಧ ಯಾವುದೇ ನಿರ್ಣಯ ಅಥವಾ ನಿರ್ಧಾರ ಕೈಗೊಂಡರೆ ಅದಕ್ಕೆ ತಕ್ಕ ತಿರುಗೇಟು ನೀಡಿಯೇ ನೀಡುತ್ತೇವೆ ಎಂದು ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳಿಗೆ ರಷ್ಯಾ ಎಚ್ಚರಿಕೆ ನೀಡಿದೆ.