ಕರ್ನಾಟಕ

karnataka

ETV Bharat / international

ಉಕ್ರೇನ್ ಗಡಿ ಕ್ರಿಮಿಯಾದಿಂದ ಸೇನೆ ಹಿಂಪಡೆದ ರಷ್ಯಾ : ವರದಿ - ಸೇನೆ ಹಿಂಪಡೆದ ರಷ್ಯಾ

ಪಾಶ್ಚಿಮಾತ್ಯ ರಾಷ್ಟ್ರಗಳು ಯುದ್ಧ ನಡೆಯುತ್ತದೆ ಎಂದು ಸುಳ್ಳು ಪ್ರಚಾರ ನಡೆಸಿ, ವಿಫಲವಾಗಿವೆ. ಒಂದೇ ಒಂದು ಗುಂಡು ಹಾರಿಸದೇ ಅವರನ್ನು ಪಾಶ್ಚಾತ್ಯ ರಾಷ್ಟ್ರಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾ ಸಚಿವಾಲಯವೊಂದರ ವಕ್ತಾರರಾದ ಮಾರಿಯಾ ಜಖರೋವಾ ಈ ಹಿಂದಷ್ಟೇ ಹೇಳಿದ್ದರು..

Russia announces end of Crimea military drills, troops leaving: AFP News Agency
ಉಕ್ರೇನ್ ಗಡಿ ಕ್ರಿಮಿಯಾದಿಂದ ಸೇನೆ ಹಿಂಪಡೆದ ರಷ್ಯಾ: ವರದಿ

By

Published : Feb 16, 2022, 1:05 PM IST

ಮಾಸ್ಕೋ,ರಷ್ಯಾ :ಉಕ್ರೇನ್ ಮತ್ತು ರಷ್ಯಾದ ನಡುವಿನ ಉದ್ವಿಗ್ನತೆ ಸ್ವಲ್ಪ ಮಟ್ಟಿಗೆ ಶಮನವಾಗುತ್ತಿದೆ. ಕ್ರಿಮಿಯಾ ಪ್ರದೇಶದಿಂದ ಸೇನೆಯನ್ನು ಹಿಂಪಡೆಯಲಾಗಿದೆ. ಸೈನಿಕರು ತಮ್ಮ ತಮ್ಮ ನೆಲೆಗಳಿಗೆ ಮರಳುತ್ತಿದ್ದಾರೆ ಎಂದು ರಷ್ಯಾ ಬುಧವಾರ ಹೇಳಿದೆ ಎಂದು ಎಎಫ್​ಬಿ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಸೇನೆಯನ್ನು ಹಿಂಪಡೆಯುವುದಾಗಿ ರಷ್ಯಾ ಹೇಳಿದ್ದ ಒಂದು ದಿನದಲ್ಲೇ ಸೈನ್ಯವನ್ನು ಹಿಂಪಡೆಯುವ ಪ್ರಕ್ರಿಯೆ ಚಾಲ್ತಿಗೆ ಬಂದಿದೆ. ತಮ್ಮ ಶಾಶ್ವತ ನಿಯೋಜನೆಯ ಸ್ಥಳಗಳಿಗೆ ಸೇನೆಯ ತುಕಡಿಗಳು ಚಲಿಸುತ್ತಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳು ಯುದ್ಧ ನಡೆಯುತ್ತದೆ ಎಂದು ಸುಳ್ಳು ಪ್ರಚಾರ ನಡೆಸಿ, ವಿಫಲವಾಗಿವೆ. ಒಂದೇ ಒಂದು ಗುಂಡು ಹಾರಿಸದೇ ಅವರನ್ನು ಪಾಶ್ಚಾತ್ಯ ರಾಷ್ಟ್ರಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾ ಸಚಿವಾಲಯವೊಂದರ ವಕ್ತಾರರಾದ ಮಾರಿಯಾ ಜಖರೋವಾ ಈ ಹಿಂದಷ್ಟೇ ಹೇಳಿದ್ದರು.

ಇದನ್ನೂ ಓದಿ:ವಿಶ್ವಾಸ ಹೆಚ್ಚಿಸುವ ಕ್ರಮಗಳನ್ನು ಚರ್ಚಿಸಲು ರಷ್ಯಾ ಸಿದ್ಧ : ಪುಟಿನ್

ರಷ್ಯಾದ ಅಧ್ಯಕ್ಷ ಪುಟಿನ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕ್ಷಿಪಣಿ ನಿಯೋಜನೆ ಮತ್ತು ಮಿಲಿಟರಿ ಪಾರದರ್ಶಕತೆಯ ಕುರಿತು ಅಮೆರಿಕ ಮತ್ತು ನ್ಯಾಟೋ ಜೊತೆ ಮಾತುಕತೆಗೆ ರಷ್ಯಾ ಸದಾ ಸಿದ್ಧವಾಗಿರುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಈಗ ಕ್ರಿಮಿಯಾ ಪ್ರದೇಶದಿಂದ ಸೇನೆಯನ್ನು ಹಿಂಪಡೆದುಕೊಳ್ಳಲಾಗಿದೆ.

ABOUT THE AUTHOR

...view details