ವಿಶ್ವಸಂಸ್ಥೆ: ವಿದೇಶಿ ಪ್ರಜೆಗಳನ್ನು ಶಾಂತಿಯುತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ರಷ್ಯಾದ ಮಿಲಿಟರಿ ಪ್ರಯತ್ನಿಸುತ್ತಿದೆ. ಆದರೆ ಉಕ್ರೇನಿಯನ್ ರಾಷ್ಟ್ರೀಯವಾದಿಗಳು 3,700 ಕ್ಕೂ ಹೆಚ್ಚು ಭಾರತೀಯ ನಾಗರಿಕರನ್ನು ವಿವಿಧ ನಗರಗಳಲ್ಲಿ ಬಲವಂತವಾಗಿ ಹಿಡಿದಿಟ್ಟುಕೊಂಡಿದ್ದಾರೆ ಎಂದು ರಷ್ಯಾ ಆರೋಪಿಸಿದೆ.
ಯೂಕ್ರೇನ್ನಲ್ಲಿರುವ ಯುರೋಪ್ನ ಅತಿ ದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಝಪೊರಿಝಿಯಾ ಮೇಲಿನ ದಾಳಿಯ ನಂತರ ಯುಎನ್ ಭದ್ರತಾ ಮಂಡಳಿಯ ತುರ್ತು ಸಭೆ ನಡೆಸಲಾಗಿತ್ತು. ಈ ವೇಳೆ, ಅಭಿಪ್ರಾಯ ವ್ಯಕ್ತಪಡಿಸಿದ ರಷ್ಯಾದ ಖಾಯಂ ಪ್ರತಿನಿಧಿ ವಾಸಿಲಿ ನೆಬೆಂಜಿಯಾ ಅವರು, ಉಕ್ರೇನ್‌ನಲ್ಲಿನ ಮೂಲಭೂತವಾದಿಗಳು ಮತ್ತು ಉಗ್ರಗಾಮಿಗಳು ಪಾಶ್ಚಿಮಾತ್ಯ ರಾಷ್ಟ್ರಗಳ ಜತೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಿದರು.
ಐಎಸ್‌ಐಎಲ್ ಭಯೋತ್ಪಾದಕರು ಮತ್ತು ಅವರ ಸಹಚರರು ನಾಗರಿಕರ ಹಿಂದೆ ಅಡಗಿಕೊಂಡು, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ರಾಕೆಟ್ಗಳನ್ನು ಜನವಸತಿ ಪ್ರದೇಶಗಳಲ್ಲಿ ಇರಿಸುತ್ತಿದ್ದಾರೆ. ನಗರಗಳನ್ನು ತೊರೆಯಲು ಬಯಸುತ್ತಿರುವ ನಾಗರಿಕರನ್ನು ಭಯೋತ್ಪಾದಕರು ತಡೆಯುತ್ತಿದ್ದಾರೆ. ಹೀಗೆ ಮಾಡುವುದರಿಂದ ಉಕ್ರೇನಿಯನ್ನರ ಮೇಲೆ ಮಾತ್ರವಲ್ಲದೇ, ವಿದೇಶಿ ನಾಗರಿಕರ ಮೇಲೂ ಪರಿಣಾಮ ಬೀರುತ್ತದೆ ಎಂದರು.